ಕಲ್ಲೊಟ್ಟೆ ಯುವಕವೃಂದ ( ರಿ.) ಕಲ್ಲೊಟ್ಟೆ ಕಾರ್ಕಳ ,ಇದರ ಸುವರ್ಣ ಮಹೋತ್ಸವದ ಅಂಗವಾಗಿ ಪ್ರಥಮ ದಿನದ ಸಭಾ ಕಾರ್ಯಕ್ರಮವು ನಟನ ರಂಗಮಂಟಪದ ವೇದಿಕೆಯಲ್ಲಿ ಜರುಗಿತು .
ಕಾರ್ಯಕರ್ಮದ ಅಧ್ಯಕ್ಷತೆಯನ್ನು ಉದ್ಯಮಿಗಳಾದ ಪ್ರಶಾಂತ್ ಶೆಣೈ ವಹಿಸಿದರು.ಮುಖ್ಯ ಅತಿಥಿಗಳಾಗಿ ಉದ್ಯಮಿ ಮಂಗೇಶ್ ಶೆಣೈ,ನಾಗರಾಜ್ ಪೈ, ಯುವಕ ವೃಂದದ ಅಧ್ಯಕ್ಷರಾದ ಪ್ರತಾಪ್ ಆಚಾರ್ಯ,ಗೌರವಾಧ್ಯಕ್ಷರಾದ ಕೆ. ಎಸ್. ವಿಶ್ವನಾಥ್ ,ಕಾರ್ಯದರ್ಶಿ ಕೆ.ಎಸ್.ರಘುನಾಥ್. ಕೋಶಾಧಿಕಾರಿ ಪ್ರದೀಪ್ ಆಚಾರ್ಯ, ಉಪಸ್ಥಿತರಿದ್ದರು.
ಕಾರ್ಕಳದಲ್ಲಿ ಸಮಾಜ ಸೇವೆಯನ್ನು ಗೈಯುತ್ತಿರುವ ಕಾರ್ಕಳ ಪುರಸಭೆಯ ಮಾಜಿ ಪುರಸಭಾ ಸದಸ್ಯ, ಸಾರ್ವಜನಿಕ ಹಿಂದೂ ರುದ್ರ ಭೂಮಿ ಕರಿಯಕಲ್ಲು ಇದರ ವ್ಯವಸ್ಥಾಪನ ಸಮಿತಿಯ ಸಂಚಾಲಕರಾದ ಪ್ರಕಾಶ್ ರಾವ್ ಹಾಗೂ ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಶಗುನ್.ಎಸ್.ವರ್ಮ ಹೆಗ್ಡೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

