ಹೆಬ್ರಿ : ಮುದ್ರಾಡಿ, ಬಲ್ಲಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲಾ ವಠಾರದಲ್ಲಿ ಜ. 3 ರಂದು ನಡೆಯಿತು.
ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಬಲ್ಲಾಡಿ ರಾಜಶೇಖರ ಎಂ. ನೆರವೇರಿಸಿದರು, ಮುದ್ರಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಮ್ಯ ಕಾಂತಿ, ಬಲ್ಲಾಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶುಭಧರ ಶೆಟ್ಟಿ, ಪ್ರಶಾಂತ್.ಪೈ ಮುದ್ರಾಡಿ, ಕೃಷ್ಣ ಪೂಜಾರಿ ಬಲ್ಲಾಡಿ, ಉಮಾವತಿ ಭಟ್, ಶಾಲಾ ಅಧ್ಯಾಪಕ ವೃಂದ, ಇನ್ನಿತರರು ಉಪಸ್ಥಿತರಿದ್ದರು.
ಸಂಜೆ ನಡೆದ ಸಭಾ ಕಾರ್ಯಕ್ರಮವನ್ನು ಉದ್ಯಮಿ ಶ್ರೀನಿವಾಸ ಉಪಾಧ್ಯಾಯ ಕೊಡವೂರು ರವರು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಈ ಸರಕಾರಿ ಕನ್ನಡ ಶಾಲೆ ಉಳಿವಿಗಾಗಿ ಹಲವಾರು ಮಂದಿ ಶ್ರಮಪಟ್ಟಿದ್ದಾರೆ. ಅವರನ್ನು ಸ್ಮರಿಸುತ್ತಾ, ಇವತ್ತು ನಡೆಯುವ ಈ ವಿಜೃಂಭಣೆಯ ವಾರ್ಷಿಕೋತ್ಸವ ನಡೆಯಲು ಸಹಕರಿಸಿದ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜ್ಯ ಸರಕಾರ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಂಕರ ಸೇರಿಗಾರ್, ಸಿ.ಆರ್.ಪಿ. ಪ್ರೀತೇಶ್ ಕುಮಾರ್ ಶೆಟ್ಟಿ, ಮುದ್ರಾಡಿ ಗ್ರಾಮ ಪಂಚಾಯತ್ ಹಿರಿಯ ಸದಸ್ಯರಾದ ಗಣಪತಿ ಎಂ. ಮುದ್ರಾಡಿ ಎಂ.ಎನ್.ಡಿ.ಎಸ್. ಎಮ್ ಹೈಸ್ಕೂಲಿನ ಬಲ್ಲಾಡಿ ಚಂದ್ರಶೇಖರ್ ಭಟ್ ಮೊದಲಾದವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಚದ್ಮವೇಷ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆ, ಹಳೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ, ಹಳೆ ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಪರ್ಧೆ, ಮಹಿಳೆಯರಿಂದ ಕ್ರೀಡಾ ಸ್ಪರ್ಧೆ, ಮನೋರಂಜನೆ ಸ್ಪರ್ಧೆಗಳು ನಡೆದಿದ್ದು ವಿಜೇತರಾದವರಿಗೆ ಬಹುಮಾನ, ನಗದು ಪ್ರೋತ್ಸಾಹ ಧನ ವಿತರಿಸಲಾಯಿತು. ಅಂಗನವಾಡಿ ಮಕ್ಕಳಿಂದ ಮತ್ತು ವಿದ್ಯಾರ್ಥಿ ಗಳಿಂದ ನೃತ್ಯ, ನಾಟಕ ಪ್ರದರ್ಶನ ಗೊಂಡಿತು, ದಾನಿಗಳನ್ನು, ಶಾಲಾ ಅಧ್ಯಾಪಕ ವೃಂದದವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಮುದ್ರಾಡಿ ಗ್ರಾಮ ಪಂಚಾಯತ್ ಸದ್ಯಸರಾದ ರತ್ನ ಪೂಜಾರಿ, ಜಯಂತಿ ಗೌಡ, ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಸತೀಶ್ ಆಚಾರ್ಯ, ನೆಲ್ಲಿಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ರವೀಂದ್ರ ಹೆಗ್ಡೆ, ಕಾರ್ಕಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮಾನಂದ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾದ ಸಂತೋಷ್ ಪೂಜಾರಿ ನೆಕ್ಕಾರ್ ಬೆಟ್ಟು, ಶ್ರೀಧರ್ ಕುಲಾಲ್, ಕೊಳಂಬೆ ಗುರುಪ್ರಸಾದ್ ಹೆಗ್ಡೆ,ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ಕೃಷಿ ಅಧಿಕಾರಿ ಉಮೇಶ್,ಶುಭಧರ ಶೆಟ್ಟಿ, ಮುದ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀನಿವಾಸ ಭಂಡಾರಿ, ವಿದ್ಯಾರ್ಥಿ ನಾಯಕಿ ಸುಭಿಕ್ಷ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕರಾದ ಎಚ್. ಶ್ರೀಪತಿ ಬಡ್ಕಿಲ್ಲಾಯ ವರದಿ ವಾಚಿಸಿದರು,ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು,
ಶಿಕ್ಷಕರಾದ ಗಣಪತಿ ಸ್ವಾಗತಿಸಿದರು, ಪ್ರಕಾಶ್ ಪೂಜಾರಿ ನಿರೂಪಿಸಿ, ರೇಖಾ ಸುರೇಶ್ ವಂದಿಸಿದರು,ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ತುಳುನಾಟಕ ಪ್ರದರ್ಶನ ಗೊಂಡಿತು,ವಿವಿಧ ಸಮಿತಿಯ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಎಸ್. ಡಿ. ಎಂ. ಸಿ. ಸದಸ್ಯರು, ಪೋಷಕರು ಸಹಕರಿಸಿದರು.

