ಉಡುಪಿ : ಪರಶುರಾಮ ಥೀಂ ಪಾರ್ಕ್​ನಲ್ಲಿ ತಾಮ್ರದ ಹೊದಿಕೆ ಕಳವು

0
111

ಬೈಲೂರಿನ ಪರಶುರಾಮ ಥೀಮ್​ ಪಾರ್ಕ್​ನಲ್ಲಿ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಿದ, ತಾಮ್ರದ ಹೊದಿಕೆಯನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಅರುಣ್​ ಕುಮಾರ್​ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಶನಿವಾರ ಸಾಯಂಕಾಲ ಥೀಮ್​ ಪಾರ್ಕ್​ ದ್ವಾರವನ್ನು ಮೀಟಿ ಬಾಗಿಲನ್ನು ಒಡೆದು ಕಳ್ಳತನ ಮಾಡಲಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ, ಶ್ವಾನದಳ ಹಾಗೂ ಸೋಕೋ ತಂಡದಿಂದ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಪತ್ತೆಕಾರ್ಯ ಕಾರ್ಯವನ್ನು ಮುಂದುವರಿಸಲಾಗಿದೆ.

LEAVE A REPLY

Please enter your comment!
Please enter your name here