ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭೇಟಿ
ಮಣಿಪಾಲ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಕೊರಗ ಯುವಜನರ ನೇರ ನೇಮಕಾತಿಗಾಗಿ ಅಹೋರಾತ್ರಿ ಧರಣಿಯು 23 ನೇ ದಿನದತ್ತ ಮುಂದುವರಿಯುತ್ತಿದ್ದು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಭೇಟಿ ನೀಡಿ ಸಮುದಾಯದ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಸುನೀತ ಶೆಟ್ಟಿ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೋಶನಿ ಉಪಸ್ಥಿತರಿದ್ದರು.
ಕೊರಗ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ, ಸಂಯೋಜಕ ಕೆ. ಪುತ್ರನ್ ಹೆಬ್ರಿ, ಒಕ್ಕೂಟದ ಮಾಜಿ ಉಪಾಧ್ಯಕ್ಷ ಶೇಖರ ಕೆಂಜೂರು, ಶೀನಾ ಬೆಳ್ಮಣ್, ಶಕುಂತಲಾ ನೇಜಾರು, ಸಂಜೀವ ಬಾರ್ಕುರು, ನಾಗು ಗೌಡ ಮತ್ತು ಇತರರು ಹಾಜರಿದ್ದರು.

