ಕನ್ಯಾನ : ಹಸಿವು ನಿವಾರಣಾ ಕಾರ್ಯಕ್ರಮ

0
21

ಲಯನ್ಸ್ ಕ್ಲಬ್ ಸೋಮೇಶ್ವರದ ವತಿಯಿಂದ ಕನ್ಯಾನದಲ್ಲಿರುವ ಭಾರತ ಸೇವಾ ವೃದ್ಧಾಶ್ರಮ ಹಾಗೂ ಅನಾಥಾಶ್ರಮದಲ್ಲಿ ಹಸಿವು ನಿವಾರಣಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಆಶ್ರಮದ ನಿವಾಸಿಗಳಿಗೆ ಪೌಷ್ಟಿಕವಾದ ಒಂದು ಸಮಯದ ಊಟವನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ಲಯನ್ ಕೆ. ವಿಜಯನ್ ವಹಿಸಿದ್ದರು. ಆಶ್ರಮದ ಟ್ರಸ್ಟಿ ಈಶ್ವರ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಸದಸ್ಯರಾದ ನಿರ್ಮಿತಾ ಭಂಡಾರಿ, ವಿಜಯಕುಮಾರ್, ಶಶಿ ಕುಮಾರ್ ನಾಯರ್, ರಾಜಶ್ರೀ ನಾಯರ್, ಡಾ. ಅನುರೂಪಾ, ರಾಧಿಕಾ ಮಹೇಶ್, ಫ್ಲಾವಿಯಾ ಡಿ’ಸೋಜಾ ಹಾಗೂ ರಾಘವನ್ ಮೂತಾಲ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಲಯನ್ ನಿತೀಶ್ ಕೃಷ್ಣ ಸ್ವಾಗತ ಭಾಷಣ ಮಾಡಿದರು. ಕ್ಲಬ್ ಪರಿವಾರ ಸದಸ್ಯರಾದ ಹರೀಶ್ ಭಂಡಾರಿ ಅವರು ವಂದನಾರ್ಪಣೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಸೋಮೇಶ್ವರ ಲಯನ್ಸ್ ಕ್ಲಬ್ ಸದಸ್ಯರ ಜೊತೆಗೆ ಕ್ಲಬ್ಬಿನ ಕುಟುಂಬ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here