ವರದಿ ರಾಯಿ ರಾಜ ಕುಮಾರ
ಬಂಟ್ವಾಳ ತಾಲೂಕು ಪಿಂಚಣಿದಾರ ಸಂಘದ ವಾರ್ಷಿಕ ಸಭೆ ಲಯನ್ ಭವನದಲ್ಲಿ ಜರಗಿತು. ಲಯನ್ ಪಿ.ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕನ್ನಡ ಪ್ರೊಫೆಸರ್ ರಾಜಮಣಿ ರಾಮಕುಂಜ, ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ ಮಂಗಳೂರು ಅಧ್ಯಕ್ಷರಾದ ಬಿ. ಎಂ. ಗೋಪಾಲ್ ರಾವ್ , ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶಿವ ಪ್ರಸಾದ್ ಶೆಟ್ಟಿ ಉಪಸ್ಥಿರಿದ್ದರು. ಅಗಲಿದ 10 ಸದಸ್ಯರ ಪಟ್ಟಿ ಯನ್ನು ನಾರಾಯಣ ಕುಲಾಲ್ ಮಂಡಿಸಿ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಾರ್ಷಿಕ ವರದಿಯನ್ನು ಕಾರ್ಯದರ್ಶಿ ನಿಲೋಜಿ ರಾವ್ ವಾಚಿಸಿದರು. ವಾರ್ಷಿಕ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಜಲಜಾಕ್ಷಿ ಮಂಡಿಸಿದರು. 75 ವರ್ಷ ವಯಸ್ಸಿನ 22 ಸದಸ್ಯರನ್ನೂ ಸನ್ಮಾನಿಸಲಾಯಿತು. ಮುಂದಿನ 3 ವರ್ಷಕ್ಕೆ ಕಾರ್ಯಕಾರಿ ಸಮಿತಿಗೆ 20 ಸದಸ್ಯರನ್ನು ಅನುಮೋದನೆ ಪಡೆಯಲಾಯಿತು.
ಪಿಂಚಣಿ, ಕ್ಯಾಮುಟೇಷನ್, ಆಯುಷ್ ಮಾನ್ ಕಾರ್ಡು ಸವಲತ್ತು ಬಗ್ಗೆ ಜಯರಾಮ ಪೂಜಾರಿ ಮಾಹಿತಿ ನೀಡಿದರು. ಸೋಮಪ್ಪ ಬಂಗೇರ, ನಾರಾಯಣ ಪೂಜಾರಿ,ಆನಂದ ನಾಯ್ಕ,ಸಹಕರಿಸಿದರು. ಜಲಜಾಕ್ಷಿ ಕುಲಾಲ್ ವಂದಿಸಿದರು. ಸೇಸಪ್ಪ ಕಾರ್ಯಕ್ರಮ ನಿರ್ವಹಿಸಿದರು.
.

