ಪುತ್ತೂರು : ಸಾಹಿತ್ಯ ಜನಮನವನ್ನು ತಲುಪಬೇಕು – ಡಾ. ಹರಿಕೃಷ್ಣ ಪುನರೂರು

0
63

ಸಾಹಿತ್ಯ ಜನಮನವನ್ನು ತಲುಪಿ ಪುಸ್ತಕ ಓದುವ ಪ್ರವೃತ್ತಿ ಬೆಳೆಯಬೇಕು. ಪುಸ್ತಕ ಪ್ರಕಟಣೆಗೆ ಸಹಕಾರ ನೀಡುವ ಮೂಲಕ ಬರೆಯುವವರಿಗೆ ಪ್ರೋತ್ಸಾಹ ನೀಡಬೇಕು ಎಂದು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು.

ಅವರು ಕಥಾಬಿಂದು ಪ್ರಕಾಶನ ಮಂಗಳೂರು, ಸೀನಿಯರ್ ಛೇಂಬ‌ರ್ ಇಂಟ‌ರ್ ನ್ಯಾಶನಲ್ ನೇತ್ರಾವತಿ ಸಂಗಮ ಜೋಡುಮಾರ್ಗ ಮತ್ತು ಕ.ಚು.ಸಾ.ಪ. ದ.ಕ. ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ಭಯಂಕೇಶ್ವರ ದೇವಸ್ಥಾನ ಸಭಾಂಗಣ ಪಾಣೆಮಂಗಳೂರಿನಲ್ಲಿ ಜ.4 ರಂದು ನಡೆದ ಕಥಾಬಿಂದು ಸಾಹಿತ್ಯ ಸಂಭ್ರಮ -2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಸೀನಿಯರ್ ಛೇಂಬರ್ ಅಧ್ಯಕ್ಷ ತೇವು ತಾರನಾಥ ಕೊಟ್ಟಾರಿ ಮಾತನಾಡಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸಾಹಿತ್ಯ ಹೆಚ್ಚು ಹೆಚ್ಚು ಪ್ರಕಟವಾಗಬೇಕು ಎಂದರು. ಹಿರಿಯ ಸಾಹಿತಿ ಡಾ. ಕೊಳ್ಳಪ್ಪ ಗೋವಿಂದ ಭಟ್, ಕ.ಚು.ಸಾ.ಪ ಬಂಟ್ವಾಳ ತಾಲೂಕು ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಕವಯಿತ್ರಿ ಡಾ. ಶಾಂತ ಪುತ್ತೂರು ಸಮ್ಮೇಳನಕ್ಕೆ ಶುಭ ಹಾರೈಸಿ ಮಾತನಾಡಿದರು.

ರಾಜ್ಯ ಮಟ್ಟದ ಕವಿಗೋಷ್ಠಿ ಹಿರಿಯ ಸಾಹಿತಿ ಜಯಾನಂದ ಪೆರಾಜೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾ.ಮ ಸತೀಶ್ ಬೆಂಗಳೂರು, ಶಾರದಾ ಮೊಳೆಯಾರ್, ಪ್ಲಾವಿಯಾ ಅಲ್ಬುಕರ್ಕ್ ಪುತ್ತೂರು, ಗೀತಾ ಕೊಂಕೋಡಿ, ಸೌಮ್ಯ ಆರ್. ಶೆಟ್ಟಿ, ರೋಹಿಣಿ ಆಚಾರ್ಯ ಪುತ್ತೂರು, ಮಲ್ಲಿಕಾರ್ಜುನ ಎಚ್. ಕೆರೂಡಿ, ಸವಿತಾ ಕರ್ಕೆರ ಕಾವೂರು, ಪ್ರೊ.ಸುರೇಶ ಎಮ್, ಹರಿಜನ, ಅಶ್ವಿಜ ಶ್ರೀಧರ, ಮಮತ ಡಿ.ಕೆ. ಸುರೇಶ್ ಕುಮಾರ್ ಚಾರ್ವಾಕ, ಜಯರಾಮ ಪಡ್ರೆ, ಶಿಲ್ಪ ಎನ್., ಬಿಂದ್ಯಾ ಕುದ್ರಾಜೆ, ಶ್ವೇತಾ ಡಿ ಬಡಗಬೆಳ್ಳೂರು, ರಮೇಶ್ ಮೆಲ್ಕಾರ್, ರಜನಿ ಚಿಕ್ಕಮಠ,ಪ್ರತಿಮಾ ತುಂಬೆ ಸುಭಾಷಿಣಿ ಚಂದ್ರನ್, ಗಿರೀಶ್ ಪೆರಿಯಡ್ಕ, ಎಸ್.ಜಯಶ್ರೀ ಶೆಣೈ ಬಿ.ಸಿ.ರೋಡು,ಡಾ.ವಾಣಿಶ್ರೀ ಕಾಸರಗೋಡು, ಕವಿಗೋಷ್ಠಿ ಸಂಚಾಲಕಿ ಡಾ.ಶಾಂತಾ ಪುತ್ತೂರು ಮೊದಲಾದವರು ಸ್ವರಚಿತ ಕವನ ವಾಚಿಸಿದರು.

ಕನ್ನಡ ರತ್ನ ರಾಜ್ಯ ಪ್ರಶಸ್ತಿ ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಪತ್ರಕರ್ತೆ ವಾಣಿ ರಘುನಾಥ್ ಮುಂಬೈ, ಡಾ. ಜೋಸೆಫ್ ಲೋಬೋ, ಯಾದವ ಹರೀಶ್, ರಕ್ತದಾನಿ ಮಂಜು ಮೈಸೂರು, ಪೂರ್ಣಿಮಾ ಗುರುಮೂರ್ತಿ, ಅನಿಲ್ ಮೆಂಡೋನ್ಸಾ ಮಂಜುನಾಥ ಕೆ ಮೈಸೂರು, ಲಯನ್ ಕುಮಾರ್, ಕುಮಾರಿ ಅರ್ನಾ ಎಸ್. ಭಟ್ ಇವರನ್ನು ಕನ್ನಡ ರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕೃತಿಗಳ ಬಿಡುಗಡೆ ಎ.ಪಿ. ಉಮಾಶಂಕರಿ ಮರಿಕೆ ಅವರ ಬಾಂಧವ್ಯದ ನೆಲೆ ಹಾಗೂ ತಿರುವುಗಳು, ಪಂಕಜಾ ರಾಮ ಭಟ್ ಮುಡಿಪುರವರ ಮಾನಸ ವೀಣೆ, ಪುಷ್ಪ ಪ್ರಸಾದರ ದಿವ್ಯಾಕ್ಷರಿ, ನೀಮಾ ಲೋಬೋ ಅವರ ಕನಸ್ಸೇ ಥ್ಯಾಂಕ್ಯೂ, ಆಶಾದಿಲೀಪ್ ಸುಳ್ಯಮೆಯವರ ಆಪ್ತ ಸಂಗಾತಿ, ಪ್ರಕಾಶ್ ಸುವರ್ಣ ಕಟಪಾಡಿ ಯವರ ಪಂಜುರ್ಲಿ,ಡಾ. ಕೊಳ್ಳಪ್ಪೆ ಗೋವಿಂದ ಭಟ್ಟರ ಸಂಪಾದಕತ್ವದ ಕಥಾ ತೋರಣ ಕೃತಿಗಳನ್ನು ಹರಿಕೃಷ್ಣ ಪುನರೂರು ಲೋಕಾರ್ಪಣೆ ಮಾಡಿದರು.

ಕಥಾ ಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್ ಸ್ವಾಗತಿಸಿ ಪ್ರಸ್ತಾವನೆ ಗೈದು ಲೇಖಕರಿಗೆ ಅಭಿನಂದನೆ ಸಲ್ಲಿಸಿದರು. ಶೋಭದಿನೇಶ್ ಉದ್ಯಾವರ, ಗೀತಾ ಕೊಂಕೊಡಿ ನಿರೂಪಿಸಿದರು.ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದಲ್ಲಿ ಸಾಹಿತ್ಯ ಗಾನ ನೃತ್ಯ ವೈಭವ ತಂಡ ಮತ್ತು ಸುಭಾಷಿಣಿ ಬೇಕೂರು ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶಿಕ್ಷಕಿ ರೇಖಾ ರಾವ್ ವಂದಿಸಿದರು.

LEAVE A REPLY

Please enter your comment!
Please enter your name here