ಕಾರ್ಕಳ ಚೇತನ ವಿಶೇಷ ಶಾಲೆಗೆ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಆಹಾರ ಸಾಮಗ್ರಿ ಹಾಗೂ ಧನಸಹಾಯವನ್ನು ನೀಡುವ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಶಿಕ್ಷಕಿಯರ ತ್ಯಾಗ ಮತ್ತು ವಾತ್ಸಲ್ಯಮಯ ಸೇವೆ, ಆಡಳಿತ ಮಂಡಳಿಯ ಸೇವಾ ಮನೋಭಾವನೆ ಅಭಿನಂದನೀಯ ಎಂದರು.
ಕಾರ್ಯಕ್ರಮದ ಪ್ರಾಯೋಜಕರು ದಾನಿಗಳೂ ಆದ ಜಗದೀಶ್ ಟಿ. ಯವರು ರೂ. 21,000 ಮೌಲ್ಯದ ಅಕ್ಕಿ ಹಾಗೂ 30,000 ರೂ. ಮೊತ್ತದ ಚೆಕ್ ಅನ್ನು ಸಂಸ್ಥೆಗೆ ಹಸ್ತಾಂತರಿಸಿದರು.
ಸಂಸ್ಥೆಯ ಗೌರವಾಧ್ಯಕ್ಷ ಗಣಪತಿ ಹೆಗ್ಡೆ, ರೋಟರಿ ಸದಸ್ಯರಾದ ಸುರೇಶ ನಾಯಕ್, ಹರಿಶ್ಚಂದ್ರ ಹೆಗ್ಡೆ, ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ, ಕಾರ್ಯದರ್ಶಿ ಚೇತನ್ ನಾಯಕ್ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ರಘುನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ನಿರೂಪಿಸಿದ ಶಿಕ್ಷಕಿ ಮಂಜುಳಾ ಸ್ವಾಗತಿಸಿ ವಂದಿಸಿದರು.

