ಮೂಡುಬಿದಿರೆ ತಾಲೂಕಿನ ಕೋಟೆಬಾಗಿಲು ಸರಕಾರಿ ಜನರಲ್ ಶಾಲೆಯ ವಿದ್ಯಾರ್ಥಿಗಳಿಗೆ ಜನವರಿ 10ರಂದು ಪರಿಸರ ಮಾಹಿತಿ ನೀಡಲಾಯಿತು. ‘ನಮ್ಮ ಶಾಲೆ ನಮ್ಮ ಪರಿಸರ’ ವಿಚಾರವಾಗಿ ಹಲವಾರು ಮಾಹಿತಿಗಳನ್ನು ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ, ಪತ್ರಕರ್ತ ರಾಯಿ ರಾಜ ಕುಮಾರ ಹಂಚಿಕೊಂಡರು. ಹಲವಾರು ಮಾಹಿತಿಗಳಿಗೆ ಸೂಕ್ತ ಉದಾಹರಣೆಗಳನ್ನು ನೀಡಿ ಮಕ್ಕಳಿಗೆ ಮನದಟ್ಟು ಮಾಡಿಸಿದರು.
ಶಾಲಾ ಅಧ್ಯಾಪಕಗಳು, ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.
.

