ಅಳದಂಗಡಿ ಮಂಡಲ ಹಿಂದೂ ಸಂಗಮ ಆಯೋಜನ ಸಮಿತಿಯ ನೇತೃತ್ವದಲ್ಲಿ ದಿನಾಂಕ 01-02- 2026 ಭಾನುವಾರ ಶ್ರೀ ಸತ್ಯದೇವತೆ ಮೈದಾನ ಅಳದಂಗಡಿಯಲ್ಲಿ ನಡೆಯಲಿರುವ ಹಿಂದೂ ಸಂಗಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತದಾರರಾದ ಶ್ರೀ ಶಿವಪ್ರಸಾದ್ ಅಜಿಲ ಅಳದಂಗಡಿಯವರು ಶ್ರಿ ಸೋಮನಾಥೇಶ್ವರಿ ದೇವಸ್ಥಾನ ದಲ್ಲಿ ಬಿಡುಗಡೆಗೊಳಿಸಿದರು . ಈ ಸಂದರ್ಭದಲ್ಲಿ ವೇಣೂರು ತಾಲೂಕು ಮತ್ತು ಅಳದಂಗಡಿ ಮಂಡಲ ಹಿಂದೂ ಸಂಗಮ ಅಯೋಜನ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

