ಪ್ರತಿಷ್ಠಿತ ‘ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ’ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಗೌರವ ಪ್ರಶಸ್ತಿಯು ಡಾ. ಸೋಮಶೇಖರ ಮಯ್ಯ ಅವರಿಗೆ ಸಂದಿದೆ . ಸಂಗೀತ ಕ್ಷೇತ್ರದಲ್ಲಿ ಅವರು ನೀಡಿರುವ ಅಪಾರ ಕೊಡುಗೆಯನ್ನು ಪರಿಗಣಿಸಿ, ‘ಶಾಸ್ತ್ರೀಯ ಮತ್ತು ಸುಗಮ ಸಂಗೀತದಲ್ಲಿನ ಅತ್ಯುತ್ತಮ ಸಾಧನೆ’ (Excellence in Classical & Light Music) ವಿಭಾಗದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇತ್ತೀಚೆಗೆ ಪುದುಚೇರಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಡಾ. ಮಯ್ಯ ಅವರಿಗೆ ಈ ಗೌರವವನ್ನು ಅಧಿಕೃತವಾಗಿ ಪ್ರದಾನ ಮಾಡಲಾಯಿತು. ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಿಂದ ನೀಡಲ್ಪಡುವ ಈ ಪ್ರಶಸ್ತಿಯು , ಸಾಧಕರ ಸುದೀರ್ಘ ಅನುಭವ ಮತ್ತು ಪ್ರೊಫೈಲ್ ಅನ್ನು ಕೂಲಂಕಷವಾಗಿ ಪರಿಶೀಲಿಸಿ ನೀಡುತ್ತದೆ. ಡಾ. ಮಯ್ಯ ಅವರ ಕಲಾ ಜೀವನದ ಸಾಧನೆಗೆ ಈಗ ಅಂತರಾಷ್ಟ್ರೀಯ ಗೌರವದ ಮನ್ನಣೆ ದೊರೆತಂತಾಗಿದೆ. ಈ ಯಶಸ್ಸಿಗೆ ಅವರ ಹಿತೈಷಿಗಳು ಮತ್ತು ಸಂಗೀತ ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

