ಖ್ಯಾತ ವೈದ್ಯ ಸಾಹಿತಿ, ದಂತ ವೈದ್ಯ ಮತ್ತು ಬಾಯಿ ಮುಖ ದವಡೆ ಶಸ್ತ್ರಚಿಕ್ಸಿತಕ ಡಾ|| ಮುರಲೀ ಮೋಹನ್ ಚೂಂತಾರು ಅವರ 17ನೇ ಕೃತಿ ಸುಭಿಕ್ಷಾ 2,ಆರೋಗ್ಯ ಮಾರ್ಗದರ್ಶಿ ಇದರ ಬಿಡುಗಡೆ ದಿನಾಂಕ: 24-12-2026 ನೇ ಬುಧವಾರದಂದು ಮಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ಬೆಳಿಗ್ಗೆ 11.00 ಘಂಟೆಗೆ ಜರಗಲಿದೆ ಎಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇದರ ಪ್ರಕಟಣೆಯಲ್ಲಿ ತಿಳಿಸಿದೆ.
ಹವ್ಯಕ ಸಭಾ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಇದರ ಜಂಟಿ ಆಶ್ರಯದಲ್ಲಿ,ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ ಇದರ ಸಹಕಾರದೊಂದಿಗೆ ಈ ಪುಸ್ತಕ ಬಿಡುಗಡೆ ನಡೆಯಲಿದ್ದು, ಡಾ ಜಯ ಪ್ರಕಾಶ್ ತೊಟ್ಟೆತ್ತೋಡಿ,ಅಧ್ಯಕ್ಷರು,ಕ ಸಾ ಪ ,ಗಡಿನಾಡು ಘಟಕ,ಕಾಸರಗೋಡು ಜಿಲ್ಲೆ ಇವರು ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ. ಖ್ಯಾತ ಸಾಹಿತಿ ಪ್ರೊ. ಡಾ ಮೀನಾಕ್ಷಿ ರಾಮಚಂದ್ರ ಅವರು ಕೃತಿಯ ಬಗ್ಗೆ ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ಉಮೇಶ್ ನಾಯಕ್ ,ಅಧ್ಯಕ್ಷರು,ಕ ಸಾ ಪ ಪುತ್ತೂರು ಇವರು ಭಾಗವಹಿಸಲಿದ್ದಾರೆ . ಗೀತಾ ಗಣೇಶ್,ಅಧ್ಯಕ್ಷರು,ಹವ್ಯಕ ಸಭಾ ಮಂಗಳೂರು ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಲೇಖಕ ಡಾ|| ಮುರಲೀ ಮೋಹನ್ ಚೂಂತಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

