ಪಡುಕುಡೂರಿನಿಂದ ಸಿರಿಬೈಲು ದೇವಸ್ಥಾನಕ್ಕೆ ಪಾದಯಾತ್ರೆ

0
8

ಪಡುಕುಡೂರು : ಪಡುಕುಡೂರು ಗ್ರಾಮದ ಪಾದಯಾತ್ರಾರ್ಥಿಗಳ ವತಿಯಿಂದ ಬುಧವಾರ ಪಡುಕುಡೂರು ಭದ್ರಕಾಳಿ ದೇವಸ್ಥಾನದಿಂದ ಕಡ್ತಲ ಸಿರಿಬೈಲು ಶ್ರೀ ಬರ್ಬರೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ೧೦ನೇ ವರ್ಷದ ಪಾದಯಾತ್ರೆ ನಡೆಯಿತು.

ಪಡುಕುಡೂರು ಭದ್ರಕಾಳಿ ದೇವಸ್ಥಾನದ ಅರ್ಚಕ ವಿಧ್ವಾನ್‌ ಸೂರಿಮಣ್ಣು ರವಿರಾಜ್ ಉಪಾಧ್ಯಾಯ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ಮುನಿಯಾಲು ಶಂಕರ ಶೆಟ್ಟಿ ಉಪಸ್ಥಿತರಿದ್ದರು.

ಅಶೋಕ್‌ ಎಂ ಶೆಟ್ಟಿ, ಭಾರವಿ ಶೆಟ್ಟಿ, ಪ್ರಸನ್ನ ಶೆಟ್ಟಿ ಜಯಲೀಲಾ, ಶಂಕರ ಶೆಟ್ಟಿ ಪಂಚವಟಿ, ರವಿ ಶೆಟ್ಟಿ, ಹರೀಶ ಪೂಜಾರಿ, ಜ್ಯೋತಿ ಪ್ರಸಾದ್‌ ಶೆಟ್ಟಿ, ಗಣೇಶ ಆಚಾರ್ಯ, ಶಂಕರ ಆಚಾರ್ಯ, ಚಿತ್ರಾ ಪೂಜಾರಿ, ತಾರಾವತಿ ಶೆಟ್ಟಿ, ಅಮಿತಾ ಶೆಟ್ಟಿ, ಸವಿತಾ ಶೆಟ್ಟಿ, ಶ್ರೀಧರ ಆಚಾರ್ಯ, ಉದಯ ಪೂಜಾರಿ, ಪ್ರಕಾಶ ಶೆಟ್ಟಿಗಾರ್‌, ಮುಖ್ಯ ಶಿಕ್ಷಕ ಹರೀಶ ಪೂಜಾರಿ, ಗ್ರಾಮಸ್ಥರು, ಸಂಘಸಂಸ್ಥೆಗಳ ಸದಸ್ಯರು, ಪ್ರಮುಖರು, ಮಹಿಳಾ ಸದಸ್ಯರು, ವಿದ್ಯಾರ್ಥಿಗಳು ಪಾದಯಾತ್ರೆಯಲ್ಲಿ ಪಾಲ್ಗೋಂಡರು. ಕಡ್ತಲದಲ್ಲಿ ಪಂಚಾಯಿತಿ ಅಧ್ಯಕ್ಷ ಸುಕೇಶ ಹೆಗ್ಡೆ, ಪ್ರಮುಖರಾದ ಜಗದೀಶ ಹೆಗ್ಡೆ, ವಿಶ್ವನಾಥ ಶೆಟ್ಟಿ ಸೇರಿದಂತೆ ಮುಖಂಡರು ಸ್ವಾಗತಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here