ಜ.18 ರಂದು ಶ್ರೀ ಗಾಯತ್ರಿ ಪರಿವಾರದ ಬೆಳ್ಳಿ ಹಬ್ಬ ಆಚರಣೆ ಉದ್ಘಾಟನೆ

0
80

ದಾವಣಗೆರೆ : ದಾವಣಗೆರೆಯ ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಆಧ್ಯಾತ್ಮ ಸಂಸ್ಥೆ ಪ್ರಾರಂಭವಾಗಿ 25 ವರ್ಷಗಳು ಆಯಿತು. ಈ ಪ್ರಯುಕ್ತ ಜನವರಿ 18 ರಂದು ಭಾನುವಾರ ಬೆಳಿಗ್ಗೆ 7 ಗಂಟೆಗೆ ನಗರದ ಜಯದೇವ ವೃತ್ತದ ಹತ್ತಿರವಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ಪರಿವಾರದ ಬೆಳ್ಳಿ ಹಬ್ಬ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಉದ್ಘಾಟನೆಯಾಗಲಿದೆ ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಸಮಾರಂಭದ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಅರ್ಚಕರ ಪುರೋಹಿತ ಪರಿಷತ್ತಿನ ದಾವಣಗೆರೆ ಜಿಲ್ಲಾಧ್ಯ್ಯಕ್ಷರಾದ ಡಾ. ಪವನ್ ಭಟ್ ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಪರಿವಾರದ ಅಧ್ಯಕ್ಷರಾದ ಡಾ|| ರಮೇಶ್ ಪಟೇಲ್ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪರಿವಾರದ ಗೌರವ ಅಧ್ಯಕ್ಷರಾದ ಡಾ|| ಸುಶೀಲಮ್ಮ, ಪರಿವಾರದ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್ ಆಗಮಿಸಲಿದ್ದಾರೆ.

ಈ ಆಧ್ಯಾತ್ಮಕ ಪರಂಪರೆಯ ಸಮಾರಂಭಕ್ಕೆ ಸಾರ್ವಜನಿಕವಾಗಿ ಶ್ರೀ ಗಾಯತ್ರಿ ದೇವಿಯ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಪರಿವಾರದ ಬೆಳ್ಳಿ ಹಬ್ಬ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಯಶಸ್ವಿಗೊಳಿಸಬೇಕಾಗಿ ಪರಿವಾರದ ಕೋಶಾಧ್ಯಕ್ಷರಾದ ಪುರುಷೋತ್ತಮ ಡಿ.ಪಟೇಲ್ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here