ತೆಲಂಗಾಣ : ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು 3 ವರ್ಷದ ಬಾಲಕಿ ದಾರುಣವಾಗಿ ಮೃತಪಟ್ಟ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾ ಪುರಸಭೆಯ ಇಂದಿರಮ್ಮ ಕಾಲೋನಿಯಲ್ಲಿ ನಡೆದಿದೆ. ಬಾಲಕಿ ತಿಂಗಳುಗಟ್ಟಲೆ ಸಾವು ಬದುಕಿನ ನಡುವೆ ಹೋರಾಡಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.
ಇಂದಿರಮ್ಮ ಕಾಲೋನಿಯ ಮುನಗಲ ಸಿಂಹಾದ್ರಿ ಮತ್ತು ಸರೋಜನಿ ದಂಪತಿಗಳು ಹಳೆಯ ಪಾತ್ರೆಗಳನ್ನು ವ್ಯಾಪಾರ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು. ಡಿಸೆಂಬರ್ 18 ರಂದು, ಅವರು ತಮ್ಮ ಮನೆಯಲ್ಲಿ ಯೇಸು ಕ್ರಿಸ್ತನಿಗಾಗಿ ಪ್ರಾರ್ಥನೆ ಮತ್ತು ಊಟವನ್ನು ಆಯೋಜಿಸಿದರು. ಆ ಸಮಯದಲ್ಲಿ, ಅವರ ಮೂರು ವರ್ಷದ ಮಗಳು ರಮ್ಯಾಶ್ರೀ ತಮ್ಮ ಮನೆಯ ಮೆಟ್ಟಿಲುಗಳ ಮೇಲೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಕೆಳಗೆ ಒಲೆಯ ಮೇಲೆ ಕುದಿಯುತ್ತಿದ್ದ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದಳು. ಮನೆಯಲ್ಲಿ ಯಾರೂ ಇದನ್ನ ಗಮನಿಸದೇ ಇದ್ದಾಗ , ಇಡೀ ದೇಹಕ್ಕೆ ಸುಟ್ಟ ಗಾಯಗಳಾಗಿತ್ತು. ಕೂಡಲೇ ಮಗುವನ್ನು ತಕ್ಷಣ ಹೈದರಾಬಾದ್ನ ನೀನಿಲೋಫರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

