ಸೂರಿಮಣ್ಣು : ಭಜನಾ ಸುವರ್ಣ ಸಂಭ್ರಮ : ಸ್ಟಿಕ್ಕರ್ ಬಿಡುಗಡೆ

0
56

ಹೆಬ್ರಿ : ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವರ ಸನ್ನಿಧಿಯಲ್ಲಿ ಜನವರಿ ೩೦ರಿಂದ ಫೆಬ್ರವರಿ ೦೬ ರ ತನಕ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯ 50 ನೇ ವರ್ಷದ ” ಭಜನಾ ಸುವರ್ಣ ಸಂಭ್ರಮ” ದ ಸ್ಟಿಕ್ಕರ್ ಬಿಡುಗಡೆ ಗುರುವಾರ ನಡೆಯಿತು. ಭಜನಾ ಸುವರ್ಣ ಸಂಭ್ರಮದ ಸಮಿತಿಯ ಎಲ್ಲಾ ಪದಾಧಿಕಾರಿಗಳ, ಸದಸ್ಯರ, ಭಕ್ತಾದಿಗಳ ಹಾಗೂ ಸಾರ್ವಜನಿಕರ ದ್ವಿಚಕ್ರ ವಾಹನ, ಆಟೋ ರಿಕ್ಷಾ, ಕಾರು ಸೇರಿದಂತೆ ಎಲ್ಲಾ ವಾಹನಗಳಿಗೆ ” ಭಜನಾ ಸುವರ್ಣ ಸಂಭ್ರಮದ ” ಸ್ಟಿಕ್ಕರ್ ಲಗತ್ತಿಸುವ ಮೂಲಕ ಹೆಬ್ರಿ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷರಾದ ಉದ್ಯಮಿ ಲಕ್ಷ್ಮೀ ನಾರಾಯಣ ನಾಯಕ್ ಕನ್ಯಾನ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ ಚಾಲನೆ ನೀಡಿದರು.


ಭಜನೆಯ ರೂವಾರಿ ಸೂರಿಮಣ್ಣು ಭಜನಾ ಸುವರ್ಣ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಸದಾಶಿವ ಉಪಾಧ್ಯಾಯ, ವಿವಿಧ ಪ್ರಮುಖರಾದ ರಮೇಶ ಪೂಜಾರಿ ಶಿವಪುರ, ವರಂಗ ರಾಮಚಂದ್ರ ಭಟ್‌, ಸುಭಾಶ್ಚಂದ್ರ ನಾಯ್ಕ್‌, ಭಜನಾ ಸುವರ್ಣ ಸಂಭ್ರಮ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಘಟಕ, ಯುವ ಘಟಕದ ಸದಸ್ಯರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಗಗನ್‌ ಶೆಟ್ಟಿ ನಿರೂಪಿಸಿದರು. ಸದಾಶಿವ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here