ಈ ವ್ಯಕ್ತಿ 50 ವರ್ಷದಿಂದ ನಿದ್ರೆಯೇ ಮಾಡಿಲ್ಲವಂತೆ..!

0
1

ರೇವಾ: ಮಧ್ಯಪ್ರದೇಶದ ರೇವಾದಲ್ಲಿ ಒಂದು ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದ್ದು ವೈದ್ಯಲೋಕವನ್ನೇ ದಿಗ್ಭ್ರಮೆಗೊಳಿಸಿದೆ. ರೇವಾ ನಗರದ ಚಾಣಕ್ಯಪುರಿ ಕಾಲೋನಿಯ ನಿವಾಸಿ 75 ವರ್ಷದ ಮೋಹನ್ ಲಾಲ್ ದ್ವಿವೇದಿ ಅವರು ಸುಮಾರು 50 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಆಶ್ಚರ್ಯದ ಸಂಗತಿ ಏನೆಂದರೆ ಇಷ್ಟು ದೀರ್ಘಾವಧಿಯ ನಿದ್ರಾಹೀನತೆಯ ನಡುವೆಯೂ, ಅವರು ಯಾವುದೇ ಗಂಭೀರ ಕಾಯಿಲೆಗಳಿಂದ ಬಳಲುತ್ತಿಲ್ಲ. ಎಲ್ಲರಂತೆ ಸಾಮಾನ್ಯವಾಗಿಯೇ ಬದುಕುತ್ತಿದ್ದಾರೆ.

ವೈದ್ಯರು ಒಬ್ಬ ಸಾಮಾನ್ಯ ವ್ಯಕ್ತಿಗೆ ದಿನಕ್ಕೆ 6ರಿಂದ 8 ಗಂಟೆಗಳ ಕಾಲ ನಿದ್ರೆ ಅಗತ್ಯ ಎಂದು ಹೇಳುತ್ತಾರೆ. 7 ಗಂಟೆಗಿಂತ ಕಡಿಮೆ ನಿದ್ರೆ ಮಾಡುವವರು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕೂಡ ಹೇಳುತ್ತಾರೆ. ಆದರೆ, ಈ ವ್ಯಕ್ತಿ 50 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ಲ ಎಂಬುದು ವೈದ್ಯರಿಗೂ ಆಶ್ಚರ್ಯ ಮೂಡಿಸಿದೆ.

ಮೋಹನ್ ಲಾಲ್ ಆರಂಭದಲ್ಲಿ ಮೋಹನ್ ಲಾಲ್ ತಾನು ನಿದ್ರೆ ಮಾಡುವುದಿಲ್ಲ ಎಂಬ ಈ ವಿಷಯವನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಅವರು ರಾತ್ರಿಯಿಡೀ ಎಚ್ಚರವಾಗಿರುತ್ತಿದ್ದರು. ಆದರೂ ಅವರ ಕಣ್ಣುಗಳು ಉರಿಯುತ್ತಿರಲಿಲ್ಲ, ಅಥವಾ ಅದು ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತಿರಲಿಲ್ಲ. ಈ ಬಗ್ಗೆ ಅವರು ತಮ್ಮ ಕುಟುಂಬಕ್ಕೆ ಹೇಳಿದಾಗ ಅವರು ಮೊದಲು ಭೂತೋಚ್ಚಾಟನೆ ಮಾಡಿಸಿದರು. ಆದರೂ ಏನೂ ಪ್ರಯೋಜನವಾಗದೆ ಇದ್ದಾಗ ದೆಹಲಿ ಮತ್ತು ಮುಂಬೈನ ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯರನ್ನು ಸಂಪರ್ಕಿಸಿದರು. ಮೋಹನ್ ಅವರ ಮೇಲೆ ಹಲವಾರು ಪರೀಕ್ಷೆಗಳನ್ನು ನಡೆಸಲಾಯಿತು. ಆದರೆ ಅವರ ನಿದ್ರೆಯ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ.

ಮೋಹನ್ ಲಾಲ್ ದ್ವಿವೇದಿ 1973ರಲ್ಲಿ ಉಪನ್ಯಾಸಕರಾಗಿದ್ದರು. ನಂತರ 1974ರಲ್ಲಿ MPPSCಯಲ್ಲಿ ಉತ್ತೀರ್ಣರಾದರು ಮತ್ತು ನಯಬ್ ತಹಶೀಲ್ದಾರ್ ಆದರು. ಅವರು 2001ರಲ್ಲಿ ಜಂಟಿ ಕಲೆಕ್ಟರ್ ಆಗಿ ನಿವೃತ್ತರಾದರು. ಅವರ ನಿದ್ರೆಯ ಸಮಸ್ಯೆಗಳು 1973ರ ಸುಮಾರಿಗೆ ಪ್ರಾರಂಭವಾದವು. ಅಂದಿನಿಂದ ಅವರು ನಿದ್ರಾಹೀನತೆಯನ್ನು ಅನುಭವಿಸುತ್ತಲೇ ಇದ್ದಾರೆ.

ಮೋಹನ್ ಲಾಲ್ ತಮ್ಮ ಹೆಚ್ಚಿನ ಸಮಯವನ್ನು ಪುಸ್ತಕಗಳನ್ನು ಓದುವುದರಲ್ಲಿ ಕಳೆಯುತ್ತಾರೆ. ಅವರು ರಾತ್ರಿಯಲ್ಲಿ ಟೆರೇಸ್ ಮೇಲೆ ವಾಕಿಂಗ್ ಮಾಡುತ್ತಾ ಬೆಳಗಾಗುವುದನ್ನೇ ಕಾಯುತ್ತಾರೆ. ಕುತೂಹಲಕಾರಿಯಾಗಿ, ಅವರ ಪತ್ನಿ ಕೂಡ ದಿನಕ್ಕೆ 3ರಿಂದ 4 ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತಾರೆ. ಮೋಹನ್ ಅವರಿಗೆ ಮಾನಸಿಕ ಸಮಸ್ಯೆಯೂ ಇಲ್ಲ, ದೈಹಿಕ ಸಮಸ್ಯೆಯೂ ಇಲ್ಲ. ಹೀಗಿದ್ದರೂ ಅವರಿಗೆ ಯಾಕೆ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಮಾತ್ರ ವೈದ್ಯರಿಗೆ ಇನ್ನೂ ಕಂಡುಹಿಡಿಯಲು ಸಾಧ್ಯವಾಗಿಲ್ಲ.

LEAVE A REPLY

Please enter your comment!
Please enter your name here