ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆದ 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕ ಉಮಾನಾಥ್ ಕೋಟ್ಯಾನ್ ಆಳ್ವಾಸ್ನ ಪರಿಣತಿಯನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆಯೋಜಿಸುವಲ್ಲಿ ಶ್ಲಾಘಿಸಿದರು.

ಜನವರಿ 16 ರಂದು ನಡೆದ ಕೊನೆಯ ದಿನದ ಕ್ರೀಡೆಗಳ ತರುವಾಯ ಮಂಗಳೂರು ವಿಶ್ವವಿದ್ಯಾಲಯ ಅದ್ಭುತ ಪ್ರದರ್ಶನವನ್ನು ನೀಡಿತು. ವಿಶೇಷವಾಗಿ ರಿಲೇಸ್ಪರ್ಧೆಯಲ್ಲಿ ಸಾಕೇತ್, ಕೇಶವನ್, ಪ್ರಥಮೇಶ್ ಮತ್ತು ಆಕಾಶ ರಾಜ್ ತಂಡ ನೂತನ ಕೂಟ ದಾಖಲೆಯನ್ನು ಬರೆಯಿತು.
ಪದಕಗಳ ಪಟ್ಟಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಒಟ್ಟು ಆರು ಚಿನ್ನ ಐದು ಬೆಳ್ಳಿ 5 ಕಂಚುಗಳನ್ನು ಒಳಗೊಂಡ 16 ಪದಕಗಳನ್ನು ಗಳಿಸಿತು.
10,000 ಮೀಟರ್ ಓಟದಲ್ಲಿ ನಿರ್ಮಲ, ಆಫ್ ಮ್ಯಾರಥಾನ್ ನಲ್ಲಿ ಭಾಗೀರಥಿ, ಹೇಮರ್ ಥ್ರೋ ನಲ್ಲಿ ಮೊಹಮ್ಮದ್ ನದೀಮ್, ಡಿಸ್ಕಸ್ ಫಾರ್ ನಲ್ಲಿ ಉಜ್ವಲ್ ಚೌದರಿ ಹಾಗೂ ನಾಲ್ಕು *400 ಮೀಟರ್ ಮಿಕ್ಸ್ ರಿಲೇಗಳಲ್ಲಿಚಿನ್ನದ ಪದಕ ಗಳಿಸಿತು.
ಕ್ರೀಡಾಕೂಟದಲ್ಲಿ ಮದ್ರಾಸ್ ವಿಶ್ವವಿದ್ಯಾಲಯ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ ಅದಕ್ಕೆ ಕಾರಣ ತಮಿಳುನಾಡು ಸರ್ಕಾರವು ಪ್ರಾಥಮಿಕ ಶಾಲಾ ಹಂತದಲ್ಲಿ ಕ್ರೀಡಾಪಟುಗಳನ್ನು ಗುರುತಿಸಿ ತರಬೇತಿ ಮತ್ತು ಉಚಿತ ಸೌಲಭ್ಯಗಳನ್ನು ಒದಗಿಸಿ ಪ್ರೋತ್ಸಾಹಿಸುತ್ತಿದೆ ಎಂದು ತರಬೇತುದಾರ ವಿನೋದ್ ಕುಮಾರ್ ತಿಳಿಸಿದರು. ಅಲ್ಲದೆ ತಮಿಳುನಾಡು ಸರಕಾರ ರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾದವರಿಗೆ 5 ಲಕ್ಷ ನಗದು ಬಹುಮಾನವನ್ನು ನೀಡಿ ಪ್ರೋತ್ಸಾಹಿಸುತ್ತಿರುವ ವಿಷಯವನ್ನು ಹೊರಗೆಡ ಹಾಕಿದರು.
ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವೇಕ್ ಆಳ್ವ, ಕೆನರಾ ಬ್ಯಾಂಕಿನ ಜಿಎಂ ಮಂಜುನಾಥ್ ಸಿಂಘೈ, ಮಾಜಿ ಸಚಿವ ಅಭಯ ಚಂದ್ರ ಜೈನ್, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಜಯರಾಮ್ ಕೋಟ್ಯಾನ್, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಅಧಿಕಾರಿಗಳು, ಹಾಗೂ ಇತರರು ಹಾಜರಿದ್ದರು. ಎಎಲ್ ಮುತ್ತು ಸ್ವಾಗತಿಸಿದರು. ಡಾ. ಬಿ ವಸಂತ್ ಶೆಟ್ಟಿ ವಂದಿಸಿದರು.
.

