“ಸವಾಲುಗಳನ್ನು ಎದುರಿಸಿದಾಗ ಮಾತ್ರ ಯಶಸ್ಸು ದೊರಕುತ್ತದೆ” – ಬಿ. ಪ್ರಶಾಂತ್ ಬಾಳಿಗ

0
19


 ರಾಮಕೃಷ್ಣ ಮಠದಲ್ಲಿ “ಸ್ಫೂರ್ತಿ” ವಿಚಾರ ಸಂಕಿರಣ
 750 ಕ್ಕೂ ಹೆಚ್ಚು ವಿದ್ಯಾರ್ಥಿಗಳುಭಾಗಿ

“ಎಂ ಆರ್ ಪಿ ಎಲ್ ಮತ್ತು ರಾಮಕೃಷ್ಣ ಮಿಷನ್ ಬಾಂಧವ್ಯ ಹಲವು ವರ್ಷಗಳದ್ದು. ಸ್ವಚ್ಛ ಭಾರತ ಅಭಿಯಾನದ ಹಲವಾರು ಕಾರ್ಯ ಯೋಜನೆಗಳಲ್ಲಿ ನಾವು ಜೊತೆಯಾಗಿ ಕೆಲಸ ಮಾಡಿದ್ದೇವೆ. ಸ್ಫೂರ್ತಿಯಂತಹ ಹಲವಾರು ಕಾರ್ಯಕ್ರಮಗಳನ್ನು ರಾಮಕೃಷ್ಣ ಮಿಷನ್ ಆಯೋಜಿಸುತ್ತಿದೆ. ಇದು ನಿಜಕ್ಕೂ ಶ್ಲಾಘನೀಯ. ಇಂದು ಜಗತ್ತಿನಲ್ಲಿ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದು. ಇಂತಹ ಪರ್ವಕಾಲದಲ್ಲಿ ಶಿಕ್ಷಣ ಪೂರೈಸುತ್ತಿರುವ ವಿದ್ಯಾರ್ಥಿಗಳು ನಿಜಕ್ಕೂ ಪುಣ್ಯವಂತರು. ಭಾರತದಲ್ಲಿ ಇಂದು ಹಲವಾರು ಹೊಸ ಉದ್ಯಮಗಳು ಬೆಳೆಯುತ್ತಿವೆ ಹಾಗೂ ವಿಪುಲವಾದ ಉದ್ಯೋಗಾವಕಾಶಗಳಿವೆ. ಉತ್ತಮ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ, ಕಠಿಣ ಪರಿಶ್ರಮ ಹಾಗೂ ಉತ್ತಮ ಪರಿಕಲ್ಪನೆ ಇಂದು ನಮಗೆ ಬೇಕಾಗಿದೆ. ಜೊತೆಗೆ ಸವಾಲುಗಳನ್ನು ಎದುರಿಸಿದಾಗ ಮಾತ್ರ ನಮಗೆ ಯಶಸ್ಸು ದೊರಕುತ್ತದೆ. ಸ್ವಾಮಿ ವಿವೇಕಾನಂದರ ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ವಾಣಿಯಂತೆ ಪ್ರತಿಯೊಬ್ಬರೂ ತಮ್ಮ ಗುರಿಯ ಕಡೆಗೆ ಮುಂದುವರೆಯಿರಿ.ಯಶಸ್ಸು ನಿಮ್ಮದಾಗಲಿ.” ಎಂದು ಮಂಗಳೂರಿನ ಎಂ.ಆರ್.ಪಿ.ಎಲ್. – ಓ.ಎನ್.ಜಿ.ಸಿ. ಯ ಆಡಳಿತ ವಿಭಾಗದ ಮುಖ್ಯ ಮಹಾಪ್ರಬಂಧಕರಾದ ಬಿ. ಪ್ರಶಾಂತ್ ಬಾಳಿಗಹೇಳಿದರು. ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್‌ನ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಮಂಗಳೂರು ಚಿತ್ಪಾವನ ಬ್ರಾಹ್ಮಣ ಸಂಘದ ಸಹಯೋಗದಲ್ಲಿ ನಡೆದ “ಸ್ಫೂರ್ತಿ” ಯುವಸಬಲೀಕರಣ ವಿಚಾರ ಸಂಕಿರಣವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೈಸೂರಿನ ಎಂಬೆಡೆಡ್ ಎಂಜಿನಿಯರಿAಗ್ ಅಂಡ್ ವೆರಿಫಿಕೇಶನ್ & ವ್ಯಾಲಿಡೇಶನ್, ಎಲ್ & ಟಿ ಟೆಕ್ನಾಲಜಿ ಸರ್ವಿಸಸ್‌ನ ಗ್ಲೋಬಲ್ ಹೆಡ್‌ಶಶಿಧರ ಡೋಂಗ್ರೆಅವರು ಮಾತನಾಡಿ “ಜನಾಂಗದಿAದ ಜನಾಂಗಕ್ಕೆ ಜಗತ್ತಿನಲ್ಲಿ ಅವಕಾಶಗಳು ಹೆಚ್ಚುತ್ತಿವೆ. ಆಧುನಿಕ ಜಗತ್ತಿನ ಸವಾಲುಗಳಿಗೆ ಹೊಂದುವAತೆ ಬೌದ್ಧಿಕವಾಗಿ ಹಾಗೂ ಸ್ಪರ್ಧಾತ್ಮಕವಾಗಿ ನಾವು ಬೆಳೆಯಬೇಕಾದ ಅಗತ್ಯವಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಹಲವಾರು ರೀತಿಯ ಸವಾಲುಗಳಿವೆ. ಜೀವನದ ಈ ಸವಾಲುಗಳಿಗೆ ರಾಮಕೃಷ್ಣ ಮಠದಂತಹ ಸಂಸ್ಥೆಗಳು ಉತ್ತರ ನೀಡುತ್ತವೆ. ಸವಾಲುಗಳನ್ನು ಎದುರಿಸಿ ನಾವು ಮುಂದುವರೆಯಬೇಕು” ಎಂದು ಅಭಿಪ್ರಾಯಪಟ್ಟರು.

ಇಸ್ರೋ ಉಡಾವಣಾ ವಾಹನ ಯೋಜನೆಯ ಮಾಜಿ ನಿರ್ದೇಶಕರು ಹಾಗೂ ಬೆಂಗಳೂರಿನ ಐ.ಐ.ಎಸ್‌ಸಿ. ಮಾಜಿ ಪ್ರಾಧ್ಯಾಪಕರಾದ ಡಾ. ಎಂ. ಎಂ. ನಾಯಕ್‌ವಿಶೇಷ ಆಹ್ವಾನಿತರಾಗಿ ಭಾಗವಹಿಸಿದರು. ಉತ್ತರಾಖಂಡದ ಮಾಯಾವತಿಯ ಅದ್ವೈತ ಆಶ್ರಮದ ಪ್ರಬುದ್ಧ ಭಾರತ ಮಾಸಪತ್ರಿಕೆಯ ಸಹ ಸಂಪಾದಕರಾದ ಸ್ವಾಮಿ ಜ್ಞಾನೀಶಾನಂದಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಂಗಳೂರು ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿಗಳಾದಸ್ವಾಮಿ ಜಿತಕಾಮಾನಂದಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೆಂಗಳೂರಿನ ಡಿವಿಷನ್ ಆಫ್ ಇಂಟರ್‌ಡಿಸಿಪ್ಲಿನರಿ ಸೈನ್ಸಸ್ ನ ಡೀನ್ ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ ಸೆಂಟರ್ ಫಾರ್ ನ್ಯಾನೋ ಸೈನ್ಸ್ ಅಂಡ್ ಎಂಜಿನಿಯರಿAಗ್‌ನ ಪ್ರಾಧ್ಯಾಪಕರಾದ ಪ್ರೊ. ನವಕಾಂತ್‌ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಶೇಷ ಅವಧಿಗಳು ಹಾಗೂ ಸಂವಾದ
ಕಾರ್ಯಕ್ರಮದ ಮೊದಲನೇ ಅವಧಿಯಲ್ಲಿ ಉತ್ತರಾಖಂಡದ ಮಾಯಾವತಿಯ ಅದ್ವೈತ ಆಶ್ರಮದ ಪ್ರಬುದ್ಧ ಭಾರತ ಮಾಸಪತ್ರಿಕೆಯ ಸಹ ಸಂಪಾದಕರಾದ ಸ್ವಾಮಿ ಜ್ಞಾನೀಶಾನಂದಜಿ ಅವರು “ಖಿhe Poತಿeಡಿ oಜಿ Seಟಜಿ-ಃeಟieಜಿ – ಆಚಿಡಿe ಣo ಆಡಿeಚಿm, ಆಚಿಡಿe ಣo ಆo” ಎಂಬ ವಿಷಯದ ಬಗ್ಗೆ ಮಾತನಾಡಿದರು. ಎರಡನೇ ಅವಧಿಯಲ್ಲಿ ಪ್ರೊ. ನವಕಾಂತ್‌ಭಟ್‌ಅವರು “ಓಚಿಟಿoಣeಛಿhಟಿoಟogಥಿ ಜಿoಡಿ ಊeಚಿಟಣhಛಿಚಿಡಿe, Seಟಿsoಡಿs ಚಿಟಿಜ ಂಡಿಣiಜಿiಛಿiಚಿಟ Iಟಿಣeಟಟigeಟಿಛಿe” ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ನಂತರ “ಈಡಿom ಅoಜe ಣo ಅhಚಿಡಿಚಿಛಿಣeಡಿ: ಖಿhe Iಟಿಟಿeಡಿ ಇಟಿgiಟಿeeಡಿiಟಿg oಜಿ Suಛಿಛಿess” ಎಂಬ ವಿಷಯದ ಕುರಿತು ನಡೆದ ಸಂವಾದ ನಡೆಯಿತು. ಈ ಸಂವಾದದಲ್ಲಿ ಪ್ರೊ. ನವಕಾಂತ್‌ಭಟ್,ಶಶಿಧರ ಡೋಂಗ್ರೆ, ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ ಮನೋವಿಜ್ಞಾನ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕಿ ಹಾಗೂ ಖಿಇಆx ವಕ್ತಾರೆವಿನತಾ ಕೆ.ಅವರು ಭಾಗವಹಿಸಿದರು. ಇನ್ಫಿನುಯಿ ನಾಲೆಡ್ಜ್ ಹಬ್‌ಸಹ ಸ್ಥಾಪಕರಾದವೈಶಾಖ್ ಕೆ.ಪಿ.ಅವರು ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು.

750 ಕ್ಕೂ ಹೆಚ್ಚು ವಿದ್ಯಾರ್ಥಿಗಳುಭಾಗಿ
ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್. ಡಿ. ಎಮ್. ತಾಂತ್ರಿಕ ಮಹಾವಿದ್ಯಾಲಯ, ಮಂಗಳೂರಿನ ಅಡ್ಯಾರ್ ನಲ್ಲಿರುವ ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯ, ಪಾಂಡೇಶ್ವರದ ಶ್ರೀನಿವಾಸ ವಿಶ್ವವಿದ್ಯಾಲಯ, ಮುಕ್ಕಾದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯ ತಾಂತ್ರಿಕ ಶಿಕ್ಷಣ ಸಂಸ್ಥೆ, ಕೊಡಿಯಾಲಬೈಲ್ ನ ಸಂತ ಅಲೋಶಿಯಸ್ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ), ಬೆಂಜನಪದವಿನ ಕೆನರಾ ತಾಂತ್ರಿಕ ಮಹಾವಿದ್ಯಾಲಯ, ವಾಮಂಜೂರಿನ ಸಂತ ಜೋಸೆಫ್ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಉಡುಪಿ ಜಿಲ್ಲೆಯ ನಿಟ್ಟೆಯ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯಇವುಗಳ ಸುಮಾರು 750 ಕ್ಕೂ ಹೆಚ್ಚು ವಿದ್ಯಾರ್ಥಿಗಳುಭಾಗವಹಿಸಿದ್ದರು. ಭಾರತೀಯ ಸೇನೆಯ ನಿವೃತ್ತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಈ ಸ್ವಾಗತಿಸಿ, ಮಂಗಳೂರು ಚಿತ್ಪಾವನ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಹೇಮಂತ್ ಭಿಡೆ ವಂದಿಸಿದರು, ಸ್ಮಿತಾ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here