ಮಂಗಳೂರು : ಗೃಹಲಕ್ಷ್ಮೀ ಹಣದಿಂದ ಸ್ಕೂಟರ್ ಖರೀದಿಸಿದ ಮಹಿಳೆ

0
99

ಮಂಗಳೂರಿನ ಮಹಿಳೆಯೊಬ್ಬರು ಗೃಹಲಕ್ಷ್ಮೀ ಹಣದಲ್ಲಿ ಸ್ಕೂಟರ್ ಖರೀದಿಸಿದ್ದಾರೆ. ಅಲ್ಲದೇ ಉಪ್ಪಿನಕಾಯಿ ಮಾರಾಟಕ್ಕೆ ಈ ಸ್ಕೂಟರ್ ಬಳಸಿಕೊಂಡು ಜೀವನ ರೂಪಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಮಂಗಳೂರಿನ ಕಲ್ಲಾಪು ಪಟ್ಲದ ಝೀನತ್ ಎಂಬ ಮಹಿಳೆ ಉಪ್ಪಿನಕಾಯಿ ಮಾರಾಟದ ಮೂಲಕ ತನ್ನ ಜೀವನ ಸಾಗಿಸುತ್ತಿದ್ದರು. ಗೃಹಲಕ್ಷ್ಮಿ ಯೋಜನೆಯಲ್ಲಿ ಬಂದ ಹಣದಿಂದ ಸ್ಕೂಟರ್​​ ಖರೀದಿಸಿರುವುದರಿಂದ ಈ ಸ್ಕೂಟರ್​​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್​, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸ್ಪೀಕರ್ ಯುಟಿ ಖಾದರ್​​ ಅವರ ಫೋಟೋ ಹಾಕಲಾಗಿದೆ.

ಸರಕಾರದ ಯೋಜನೆಯಿಂದ ಈ ಸ್ಕೂಟರ್​ ಖರೀದಿಸಿರುವುದರಿಂದ ಅವರಿಗೆ ಕೃತಜ್ಞತೆ ಸಲ್ಲಿಸಲು ಈ ಫೋಟೋ ಹಾಕಿರುವುದಾಗಿ ಝೀನತ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here