ಬಂಟ್ವಾಳ: ಇಲ್ಲಿನ ಬೈಪಾಸ್ ನಿತ್ಯಾನಂದನಗರ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀಜಿ ಭಜನಾ ಮಂದಿರದಲ್ಲಿ 32ನೇ ವರ್ಷದ ಆರಾಧನಾ ಮಹೋತ್ಸವ ಮಂಗಳವಾರ ಆರಂಭಗೊಂಡಿತು. ಇಜ್ಜ ಶಿವಕ್ಷೇತ್ರದ ಧರ್ಮದಶರ್ಿ ಸತ್ಯನಾರಾಯಣ ಭಟ್ ವಿವಿಧ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಪ್ರತಿದಿನ ರಾತ್ರಿ ಗಂಟೆ 7ರಿಂದ ಭಜನೆ ನಡೆಯಲಿದ್ದು, ಜ.23ರಂದು ಬೆಳಿಗ್ಗೆ ಗಂಟೆ 7.30ರಿಂದ ಗುರುವರ್ಯರ ಪ್ರತಿಷ್ಠಾ ವರ್ಧಂತಿ ಉತ್ಸವ ಪ್ರಯುಕ್ತ ಪಂಚಲೋಹದ ವಿಗ್ರಹಕ್ಕೆ ಭಕ್ತರಿಂದ ಸ್ವತಃ ಸೀಯಾಳ ಅಭಿಷೇಕ ನಡೆಯಲಿದೆ. ಅಂದು ಬೆಳಿಗ್ಗೆ ಗಂಟೆ 8.30ರಿಂದ ‘ಸಂತಾನ ಗೋಪಾಲಕೃಷ್ಣ ಜಪ ಮತ್ತು ಹವನ ನಡೆಯಲಿದ್ದು, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಬಿ.ದಿನೇಶ ಭಂಡಾರಿ ತಿಳಿಸಿದರು.
ಸಮಿತಿ ಗೌರವಾಧ್ಯಕ್ಷ ಸುರೇಶ ಕುಲಾಲ್, ಕಾರ್ಯದಶರ್ಿ ಹರೀಶ ಎಂ., ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಬಿ.ಹರೀಶ ಶೆಟ್ಟಿ, ಗೌರವಾಧ್ಯಕ್ಷ ಉದಯ ಕುಮಾರ್ ರಾವ್, ಪ್ರಧಾನ ಕಾರ್ಯದಶರ್ಿ ಚೆನ್ನಕೇಶವ ಡಿ.ಆರ್. ಮತ್ತಿತರರು ಇದ್ದರು.
Home Uncategorized ಬಂಟ್ವಾಳ: ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರ 32ನೇ ವರ್ಷದ ಆರಾಧನಾ ಮಹೋತ್ಸವಕ್ಕೆ...

