ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆಯಲ್ಲಿ ಕಳೆದ 50 ವರ್ಷಗಳಿಂದ ಪ್ರಖ್ಯಾತವಾಗಿರುವ ಪ್ರಭಾತ್ ಸಿಲ್ಕ್ಸ್ ನವರು ತಮ್ಮ ಸಂಸ್ಥೆಯ ನೂತನ ಲೋಗೋವನ್ನು ಬಿಡುಗಡೆ ಮಾಡಿದರು. ಜನವರಿ 20ರಂದು ಸಂಸ್ಥೆಯಲ್ಲಿ ಮೂಡುಬಿದಿರೆ ಅರಮನೆಯ ಕುಲದೀಪ್ ಎಂ ಅವರು ಲೋಗೋವನ್ನು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಮಾಡಿದ ವಿದ್ವಾನ್ ಯಶ್ವಂತ್ ಎಂಜಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮೂಡಬಿದರೆ ಟೆಂಪಲ್ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಎಂ ಕೆ, ಜೈನ್ ಮಿಲನ ಅಧ್ಯಕ್ಷ ಮಹೇಂದ್ರ ಕುಮಾರ್ ಜೈನ್, ಸಂಸ್ಥೆಯ ಪ್ರಭಾ ಚಂದ್ರ ಜೈನ್, ಸುನಂದ, ಪೂರ್ಣಚಂದ್ರ ಜೈನ್, ಅಪೇಕ್ಷ, ಪ್ರತಾಪ್ ಚಂದ್ರ ಜೈನ್, ಐಶ್ವರ್ಯ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಹೆಸರಾಂತ ಗಾಯಕರದ ಯಶವಂತ್ ಎಂಜಿ ಅವರು ಕೆಲವಾರು ಹಾಡುಗಳ ಮೂಲಕ ಸಭಿಕರನ್ನು ರಂಜಿಸಿದರು.
.

