ಬಂಟ್ವಾಳ : ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ.ಟ್ರಸ್ಟ್ ರಿ. ಬಂಟ್ವಾಳ ತಾಲೂಕು ವ್ಯಾಪ್ತಿಯ ಸ್ವಸಹಾಯ ಸಂಘಗಳ ಸದಸ್ಯರಿಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಬಂಟ್ವಾಳ ತಾಲೂಕು ಯೋಜನಾಧಿಕಾರಿಗಳಾದ ಶ್ರೀ ಜಯಾನಂದ ಪೂಜಾರಿಯವರು ಉಧ್ಘಾಟಿಸಿ ಚಾಲನೆ ನೀಡಿದರು. ಉಡುಪಿ ಪ್ರಾದೇಶಿಕ ವಿಭಾಗದ ಸಿಡ್ಬಿ ಯೋಜನಾಧಿಕಾರಿಗಳಾದ ಶ್ರೀ ಪ್ರವೀನ್ ಶಿಂಧೆ ರವರು ಸಿಡ್ಬಿ ಕಾರ್ಯಕ್ರಮ ಅನುಷ್ಠಾನದ ಬಗ್ಗೆ, ಬಡ್ಡಿದರ, ಬ್ಯಾಂಕ್ ಸಾಲ ಮಂಜೂರಾತಿ ಹಾಗೂ ಸ್ವ ಉದ್ಯೋಗಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಯೋಜನಾಧಿಕಾರಿಗಳು ಮಾತನಾಡುತ್ತಾ ಸಿಡ್ಬಿ ಕಾರ್ಯಕ್ರಮದಡಿ ಕಳೆದ 8 ವರ್ಷಗಳಲ್ಲಿ ಒಟ್ಟು 247 ಸದಸ್ಯರಿಗೆ ಒಟ್ಟು 10.35 ಕೋಟಿ ಸಾಲ ವಿತರಿಸಿದ್ದು, ಸದಸ್ಯರು ಸ್ವ ಉದ್ಯೋಗ ಮಾಡಿಕೊಂಡು ಸ್ವಾವಲಂಬನೆ ಜೀವನ ನಡೆಸಲು ಸಹಕಾರಿಯಾಗಿದೆಯೆಂದು ತಿಳಿಸಿದರು. ಈ ಸಂದರ್ಭ ಬಂಟ್ವಾಳ ತಾಲೂಕು ಆಡಳಿತ ಪ್ರಬಂಧಕರಾದ ಶ್ರೀ ನಿಸಾರ್ ಅಹಾಮ್ಮದ್. ಬಿ.ಸಿ.ರೋಡ್ ವಲಯ ಮೇಲ್ವಿಚಾರಕರಾದ ಶ್ರೀ ಗಿರೀಶ್.ಕೆ.ಡಿ. ಹಾಗೂ ಸಿಡ್ಬಿ ಫಲಾನುಭವಿಗಳು ಮತ್ತು ಬಂಟ್ವಾಳ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿಳಾದ ಶ್ರೀ ಮತಿ ಸವಿತಾರವರು ಉಪಸ್ಥಿತರಿದ್ದರು.
Home Uncategorized ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ.ಟ್ರಸ್ಟ್ ರಿ. ಬಂಟ್ವಾಳ ತಾಲೂಕು ವ್ಯಾಪ್ತಿಯ ಸ್ವಸಹಾಯ ಸಂಘಗಳ...

