ರೋಟರಿ ಆಂಗ್ಲ ಮಾಧ್ಯಮ ಶಾಲೆ, ಜ್ಯೋತಿ ನಗರ , ಮೂಡುಬಿದಿರೆ ಇಲ್ಲಿನ ಸ್ಕೌಟ್ ಮಾಸ್ಟರ್ ಮೋಹನ್ ಹೊಸ್ಮಾರ್ ಅವರು ಸ್ಕೌಟ್ಸ್ ವಿಭಾಗದ ಉನ್ನತ ಹಂತದ ತರಬೇತಿಯಾದ ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯಲ್ಲಿ ಅರ್ಹತೆ ಪಡೆದು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರಾಷ್ಟ್ರೀಯ ತರಬೇತಿ ಕೇಂದ್ರ, ಪಚ್ಮಾರಿ ವತಿಯಿಂದ ನೀಡಲಾಗುವ ಪ್ರಮಾಣಪತ್ರ ಹಾಗು ಪಾರ್ಚ್‌ಮೆಂಟ್‌ಗೆ ಭಾಜನರಾಗಿದ್ದಾರೆ.
ಇವರು ಸೆಪ್ಟೆಂಬರ್ 24 ರಿಂದ 30 ರ ವರೆಗೆ ದೊಡ್ಡಬಳ್ಳಾಪುರದ ಆನಿಬೆಸೆಂಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಕೇಂದ್ರದಲ್ಲಿ, ಸ್ಕೌಟ್ಸ್ ವಿಭಾಗದ ಲೀಡರ್ ಟ್ರೈನರ್ ಗೋಪಾಲಕೃಷ್ಣ ಇವರ ಶಿಬಿರ ನಾಯಕತ್ವದಲ್ಲಿ ತರಬೇತಿ ಪಡೆದಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ತಿಲಕಾ ಅನಂತರವೀರ ಜೈನ್, ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

