ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.ಟ್ರಸ್ಟ್ (ರಿ) ಗುರುವಾಯನಕೆರೆ ನಾರಾವಿ ವಲಯದ ನಾರಾವಿ ಸೂರ್ಯನಾರಾಯಣ ದೇವಸ್ಥಾನದ ನೂತನ ಸಭಾಭವನಕ್ಕೆ ಶ್ರೀ ಕ್ಷೇತ್ರದ ವತಿಯಿಂದ ಮಂಜೂರು ಆಗಿರುವ 2 ಲಕ್ಷ ಸಹಾಯಧನ ಮಂಜೂರಾತಿ ಪತ್ರವನ್ನು ಗುರುವಾಯನಕೆರೆ ತಾಲೂಕು ಯೋಜನಾಧಿಕಾರಿಯವರಾದ ಅಶೋಕ್ ಬಿ. ಸರ್ ಇವರು ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರವೀಂದ್ರ ಪೂಜಾರಿ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸದಾನಂದ ಬಂಗೇರ , ನಾರಾವಿ ವಲಯದ ವಲಯಾಧ್ಯಕ್ಷರಾದ ಶೇಖರ್ ಹೆಗ್ಡೆ, ವಲಯದ ಮೇಲ್ವಿಚಾರಕ ರಾದ ವಿಶಾಲ ಕೆ ,ದೇವಸ್ಥಾನದ ಆಡಳಿತ ಸಹ ಮೊಕ್ತೇಸರರಾದ ಜಗದೀಶ್ ಹೆಗ್ಡೆ, ಲಕ್ಷ್ಮಣ ಬಂಗೇರ, ಶಂಕರ, ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ ಭಜನಾ ಮಂಡಳಿ ಅಧ್ಯಕ್ಷರಾದ ನಾರಾಯಣ ಪೂಜಾರಿ, ನಾರಾವಿ ಬಿ ಒಕ್ಕೂಟದ ಅಧ್ಯಕ್ಷರಾದ ಪ್ರವೀಣ್, ನಾರಾವಿ ಅಯ್ಯಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷರಾದ ನಿತ್ಯಾನಂದ ಪೂಜಾರಿ, ನಾರಾವಿ ಅಯ್ಯಪ್ಪ ಸೇವಾ ಸಮಿತಿಯ ಗುರುಸ್ವಾಮಿ ವಿಶ್ವನಾಥ ಪೂಜಾರಿ, ರಾಮಚಂದ್ರ ಗಾಯತ್ರಿ ನಿವಾಸ ನಾರಾವಿ, ನಾರಾವಿ ಸೇವಾಪ್ರತಿನಿಧಿಗಳಾದ ರೇಷ್ಮಾ ಜೈನ್, ಹರಿಣಾಕ್ಷಿ ಉಪಸ್ಥಿತರಿದ್ದರು.

