ಶಿಕಾರಿಪುರ : ತಾಲೂಕಿನ ಹಾರೋಗೊಪ್ಪ ಗ್ರಾಮದ ರೈತ ಸೋಮಾ ನಾಯ್ಕ ಅವರಿಗೆ ಬೆಳಿಗ್ಗೆ 5 ಗಂಟೆಗೆ ಭತ್ತದ ಗದ್ದೆಗೆ ನೀರು ಬಿಡಲು ಹೋದಾಗ 2 ಕರಡಿಗಳು ದಾಳಿ ಮಾಡಿ ಗಂಭೀರವಾಗಿ ಗಾಯ ಮಾಡಿರುವ ಘಟನೆ ನಡೆದಿದೆ. ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮದ ಜನ ಭಯಬೀತರಾಗಿದ್ದಾರೆ , ಕೂಡಲೇ ಈ ಕರಡಿಗಳನ್ನು ಹಿಡಿಯಲು ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

