ಶಿವಮೊಗ್ಗ : ನಗರದ ಸೋಮಿನಕೊಪ್ಪ ಮೇಲ್ಸೇತುವೆಯ ಸಮೀಪ ರೈಲಿಗೆ ಸಿಲುಕಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
ವಿನೋಬನಗರದ ಕಲ್ಲಹಳ್ಳಿ ನಿವಾಸಿ ಈಶ್ವರಪ್ಪ(68) ಮೃತಪಟ್ಟವರು ಎಂದು ಹೇಳಲಾಗಿದೆ. ಶಿವಮೊಗ್ಗ -ತಾಳಗುಪ್ಪ ಪ್ಯಾಸೆಂಜರ್ ರೈಲಿಗೆ ಸಿಲುಕಿ ಮೃತಪಟ್ಟಿರುವ ಸಾಧ್ಯತೆ ಇದೆ. ಈಶ್ವರಪ್ಪ ಅವರ ದೇಹ ಎರಡು ಭಾಗವಾಗಿ ಹಳಿಯ ಮೇಲೆ ಬಿದ್ದಿದೆ. ಮಾಹಿತಿ ತಿಳಿದ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

