ಹಿoದು ಸಂಗಮ ಆಯೋಜನ ಸಮಿತಿ ಉಡುಪಿ ನಗರ ಪೆರಂಪಳ್ಳಿ ವಸತಿ ಸಮಿತಿಯಿಂದ ಶೋಭಾ ಯಾತ್ರೆ ಹಾಗೂ ಬೃಹತ್ ಹಿಂದೂ ಸಂಗಮವು ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಗಾಯತ್ರಿ ಧ್ಯಾನಪೀಠದ ಆವರಣದಲ್ಲಿ ನೆರವೇರಲಿದೆ.
ಫೆಬ್ರವರಿ ತಿಂಗಳ ತಾರೀಕು ಒಂದರ ಭಾನುವಾರದಂದು ಸಂಜೆ ನೆರವೇರಲಿರುವ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಅವರು ಬಿಡುಗಡೆಗೊಳಿಸಿದರು.
ಈ ಕಾರ್ಯಕ್ರಮವು ಯಶಸ್ಸನ್ನ ಕಾಣಲಿ ಎಂದು ಶುಭ ಹಾರೈಸಿದರು, ವೇದಮೂರ್ತಿ ಕೊರಂಗ್ರಾಪಡಿ ಶ್ರೀಶ ಆಚಾರ್ಯ ಅವರು ಸನಾತನ ಧರ್ಮದ ಮಹಿಮೆಯನ್ನು ವಿಶ್ಲೇಷಿಸಿದರು, ಪರಂಪಳ್ಳಿ ವಸತಿ ವಿಭಾಗದ ಸಮಿತಿ ಸದಸ್ಯರು, ಕ್ಷೇತ್ರದ ಭಕ್ತರುಗಳು ಹಾಗೂ ಉಸ್ತುವಾರಿ ಕುಸುಮ ನಾಗರಾಜ್ ಉಪಸ್ಥಿತರಿದ್ದರು.

