ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಬೊಲ್ಪು ರೈತ ಉತ್ಪಾದಕರ ಸಂಸ್ಥೆ ವತಿಯಿಂದ ಶುಕ್ರವಾರ ಆರಂಭಗೊಂಡ ಕಚೇರಿ ಮತ್ತು ಮಾರಾಟ ಮಳಿಗೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ಬಂಟ್ವಾಳ : ಇಲ್ಲಿನ ಬಿ.ಸಿ.ರೋಡು ಕೃಷಿಕ ಸಮಾಜ ಕಟ್ಟಡದಲ್ಲಿ ಬೊಲ್ಪು ರೈತ ಉತ್ಪಾದಕರ ಸಂಸ್ಥೆ ವತಿಯಿಂದ ಶುಕ್ರವಾರ ಆರಂಭಗೊಂಡ ಕಚೇರಿ ಮತ್ತು ಮಾರಾಟ ಮಳಿಗೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ರೈತರಿಗೆ ಕೃಷಿ ಇಲಾಖೆ ಮತ್ತು ರೈತ ಉತ್ಪಾದಕರ ಸಂಸ್ಥೆಯಿಂದ ವಿವಿಧ ಸೌಲಭ್ಯಗಳು ಸುಲಭವಾಗಿ ಸಿಗಲಿ ಎಂದು ಅವರು ಶುಭ ಹಾರೈಸಿದರು.
ಕೃಷಿಕ ಸಮಾಜ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೆಶಕ ಜೋ.ಪ್ರದೀಪ್ ಡಿಸೋಜ, ಸಂಸ್ಥೆ ನಿದೇಶಕರಾದ ಜಗನ್ನಾಥ ಚೌಟ ಬದಿಗುಡ್ಡೆ, ದೇವಪ್ಪ ಕುಲಾಲ್ ಪಂಜಿಕಲ್ಲು, ಆರ್ವಿನ್ ಡಿಸೋಜ ಲೊರೆಟ್ಟೊ, ಸೀತಾರಾಮ ಶೆಟ್ಟಿ ಸಜಿಪ, ಕೃಷ್ಣಪ್ಪ ಸಪಲ್ಯ ಅಂತರ, ವಿಜಯ ರೈ ಆಲದಪದವು, ಜಗದೀಶ ಭಂಡಾರಿ ಕುರ್ಯಾಳ, ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಕೆ.ಪದ್ಮನಾಭ ರೈ, ಸುಭಾಶ್ಚಂದ್ರ ಜೈನ್, ಉಮ್ಮರ ಮಂಚಿ, ಸಿಇಒ ಹರ್ಷಿತ್ ಕುಮಾರ್ ಮತ್ತಿರತರರು ಇದ್ದರು. ಸಂಸ್ಥೆ ಅಧ್ಯಕ್ಷ ರಾಜಾ ಬಂಟ್ವಾಳ್ ಸ್ವಾಗತಿಸಿ, ಕಾರ್ಯದರ್ಶಿ ಸದಾನಂದ ಶೆಟ್ಟಿ ರಂಗೋಲಿ ವಂದಿಸಿದರು.

