ಉಡುಪಿ : ಕರ್ನಾಟಕ ರಾಜ್ಯ ಪ್ರೊಫೆಷನಲ್ ಸೋಶಿಯಲ್ ವರ್ಕ್ ವೆಲ್ ಫೇರ್ ಅಸೋಸಿಯೇಷನ್ (KSPSWA) ಉಡುಪಿ ಜಿಲ್ಲಾ ಅಧ್ಯಕ್ಷ ರಕ್ಷಿತ್ ಕುಮಾರ್ ವಂಡ್ಸೆ ಇಂದು ಮದ್ಯಾಹ್ನ ಕೃಷ್ಣ ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಅವರಿಂದ ಮಂತ್ರಾಕ್ಷತೆಯನ್ನು ಪಡೆದು ಆಶೀರ್ವಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಂದಿನ ಕಾರ್ಯಕ್ರಮಗಳು ಮತ್ತು ಸಮಾಜಮುಖಿ ಕಾರ್ಯಗಳ ಯಶಸ್ವಿ ನಿರ್ವಹಣೆಯ ಹಾರೈಕೆ ಮಾಡಲಾಯಿತು. ರಕ್ಷಿತ್ ಕುಮಾರ್ ವಂಡ್ಸೆ ಈ ಅವಕಾಶದಲ್ಲಿ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿ, ಸಮಾಜ ಸೇವೆ ಹಾಗೂ ವೃತ್ತಿಪರ ಸಾಂಘಿಕ ಚಟುವಟಿಕೆಗಳಲ್ಲಿ ತಮ್ಮ ಭದ್ರಪೂರಕ ಪಾತ್ರವನ್ನು ಮುಂದುವರಿಸುವ ನಿರ್ಧಾರ ತೋರಿದರು.

