ಬಂಟ್ವಾಳ : ಇಲ್ಲಿನ ಮಂಚಿ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಪ್ರತೀ ವರ್ಷದಂತೆ ಜ.29ರಿಂದ 30ರತನಕ ಮಂಚಿ ಕುಕ್ಕಾಜೆ ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರ ಸಭಾಂಗಣದಲ್ಲಿ ‘ಮಂಚಿ ನಾಟಕೋತ್ಸವ’ ನಡೆಯಲಿದೆ.
ಜ.29ರಂದು ಸಂಜೆ 6 ಗಂಟೆಗೆ ಕಾರ್ಕಳ ಯಕ್ಷರಂಗಾಯಣ ನಿರ್ದೆಶಕ ಬಿ.ಆರ್. ವೆಂಕಟ್ರಮಣ ಐತಾಳ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಅಲ್ಲಿನ ಕಲಾವಿದರಿಂದ ‘ಸೋಮಿಯ ಸೌಭಾಗ್ಯ’ ನಾಟಕ ಪ್ರದರ್ಶನಗೊಳ್ಳಲಿದೆ.
ಜ.30ರಂದು ಸಂಜೆ 6 ಗಂಟೆಗೆ ಸಮಾರೋಪಗೊಳ್ಳಲಿದ್ದು, ಅಂದು ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಟ್ರಸ್ಟ್ ಅಧ್ಯಕ್ಷ, ವಕೀಲ ಕಜೆ ರಾಮಚಂದ್ರ ಭಟ್ ತಿಳಿಸಿದ್ದಾರೆ.
