ಲಾರಿಯಡಿಗೆ ಸಿಕ್ಕಿ ಬೈಕ್​ ಸವಾರ ಮೃತ

0
127

ಉಡುಪಿ : ಕಲ್ಸಂಕ ಜಂಕ್ಷನ್​ ಬಳಿಯ ಪಾಕಶಾಲೆ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಕಂಟೈನರ್​ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್​ ಸವಾರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಣಿಪಾಲದ ಅವಿನಾಶ್​ (29) ಮೃತರು. ಉಡುಪಿಯಿಂದ ಮಣಿಪಾಲ ಕಡೆ ಹೋಗುತ್ತಿದ್ದ ಕಂಟೈನರ್​ ಲಾರಿ ಸ್ಕೂಟರ್​ಗೆ ಢಿಕ್ಕಿ ಹೊಡೆದಿದ್ದು, ಇದರಿಂದ ನಿಯಂತ್ರಣ ತಪ್ಪಿದ ಅವಿನಾಶ್​ ಸ್ಕೂಟರ್​ ಸಮೇತ ರಸ್ತೆಗೆ ಬಿದ್ದಾಗ ಲಾರಿಯ ಚಕ್ರವು ಸವಾರದ ತಲೆಯ ಮೇಲೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here