ವರದಿ : ಮಂದಾರ ರಾಜೇಶ್ ಭಟ್
ಸುರತ್ಕಲ್ : ತುಳುನಾಡಿನ ಭಾಷೆ, ವೈವಿಧ್ಯಮಯ ಸಂಸ್ಕೃತಿ ಹಾಗೂ ಸಮಗ್ರ ಅಭಿವೃದ್ಧಿಯ ಧೇಯೋದ್ದೇಶಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ‘ತುಳುವ ಮಹಾಸಭೆ ಇಂಟರ್‌ನ್ಯಾಷನಲ್’ ಇದರ ಸುರತ್ಕಲ್ ವಲಯ ಸಮಿತಿಯ ರೂಪೀಕರಣ ಸಭೆಯು ಇದೇ ಬರುವ ಬುಧವಾರದಂದು ನಡೆಯಲಿದೆ.
ಸಭೆಯ ವಿವರಗಳು :
ದಿನಾಂಕ: 28-01-2026 (ಬುಧವಾರ)
ಸಮಯ: ಸಂಜೆ 5.30 ಕ್ಕೆ ,
ಸ್ಥಳ: ಚಾವಡಿ ಬ್ಯಾಂಕ್ವೆಟ್ ಹಾಲ್, ಅಭಿಷ್ ಬಿಸಿನೆಸ್ ಸೆಂಟರ್ (ವಿಜಯ ಮೆಡಿಕಲ್ಸ್ ಮೇಲ್ಭಾಗ), ಸುರತ್ಕಲ್.
ಸಭೆಯ ಪ್ರಮುಖ ಉದ್ದೇಶ :
ತುಳು ಭಾಷೆಯ ಉಳಿವು ಮತ್ತು ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ನಿಟ್ಟಿನಲ್ಲಿ ಸಂಘಟನೆಯನ್ನು ಬಲಪಡಿಸುವುದು ಈ ಸಭೆಯ ಮುಖ್ಯ ಗುರಿಯಾಗಿದೆ. ಸುರತ್ಕಲ್ ವ್ಯಾಪ್ತಿಯಲ್ಲಿ ತುಳುವ ಬಂಧುಗಳನ್ನು ಒಗ್ಗೂಡಿಸಿ, ಸಮರ್ಥ ವಲಯ ಸಮಿತಿಯನ್ನು ರಚಿಸುವ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಸಿದ್ಧಪಡಿಸಲಾಗುವುದು.
“ತುಳುನಾಡಿನ ಭವಿಷ್ಯವು ನಮ್ಮ ಸಂಘಟಿತ ಹೋರಾಟದಲ್ಲಿ ಅಡಗಿದೆ. ಈ ನಿಟ್ಟಿನಲ್ಲಿ ಸುರತ್ಕಲ್ ವಲಯದ ತುಳುವ ಬಂಧುಗಳು, ಸಮಾಜಮುಖಿ ಚಿಂತಕರು ಹಾಗೂ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕು.”
ಸಹಕಾರಕ್ಕೆ ವಿನಂತಿ : ಈ ಮಹತ್ವದ ಸಭೆಯಲ್ಲಿ ತುಳು ಭಾಷಾ ಪ್ರೇಮಿಗಳು ಮತ್ತು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಸಮಿತಿ ರಚನೆಗೆ ಸಲಹೆ-ಸಹಕಾರ ನೀಡಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

