ಹೆಬ್ರಿ : ಶೆಟ್ಟಿಗಾರ್ ಸಮಾಜ ಸೇವಾ ಸಂಘ (ರಿ) ಮುದ್ರಾಡಿ, ಮಹಿಳಾ ವೇದಿಕೆ ಹಾಗೂ ಯುವ ವೇದಿಕೆ ಅಜೆಕಾರು ವಲಯದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವು ಮುದ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಅಂಬಾತನಯ ವೇದಿಕೆಯಲ್ಲಿ ಜ. 25 ರಂದು ನಡೆಯಿತು.
ದ.ಕ.ಜಿಲ್ಲಾ ಪದ್ಮಶಾಲಿ ಸಮಾಜ ಸೇವಾ(ರಿ.) ಮಂಗಳೂರು ಇದರ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ ಮಾತನಾಡಿ ವಲಯ ಮಟ್ಟದಲ್ಲಿ ಸಂಘಟನೆಯು ಬಲಗೊಳ್ಳುತ್ತಿದೆ, ಪರೋಕ್ಷವಾಗಿ ಜಿಲ್ಲಾ, ರಾಜ್ಯ ಸಂಘಟನೆಗೆ ಸಹಾಯ ಮಾಡುತ್ತಿದ್ದೀರಿ, ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ಅಂಬಾತನಯರ ಹೆಸರಿನ ವೇದಿಕೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ ಸಂಘಟಕರನ್ನು ಅಭಿನಂದಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿ ಸರಕಾರ ದಿಂದ ಸಿಗುವ ಸವಲತ್ತು ಗಳನ್ನು ಪಡೆಯುವಲ್ಲಿ ಸಂಘಟನೆಯು ಪ್ರಯತ್ನಿಸಬೇಕೆಂದರು.
ಶೆಟ್ಟಿಗಾರ್ ಸಮಾಜದ ಸಾಧಕರನ್ನು ,ಗಣ್ಯರನ್ನು ಹಾಗೂ ಸ್ಥಾಪಕ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಹಾಗೂ ವಿವಿಧ ಕ್ರೀಡಾ ಸ್ಪರ್ಧೆ ಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ, ಮಹಿಳೆಯರಿಗೆ, ಹಿರಿಯರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಮುಂಬೈ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣಾನಂದ ಎಂ.ಶೆಟ್ಟಿಗಾರ್ ಸಾಲಿಕೇರಿ, ದ.ಕ.ಪದ್ಮಶಾಲಿ ಸಮಾಜ ಸೇವಾ ಕೂಟ ಬೆಂಗಳೂರು ಇದರ ಅಧ್ಯಕ್ಷರಾದ ಸುಂದರ ಎಸ್. ಶೆಟ್ಟಿಗಾರ್ ಎಕ್ಕಾರ್, ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತಿ ಪೂಜಾರಿ, ಮುದ್ರಾಡಿ ಶೆಟ್ಟಿಗಾರ್ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾದ ಎಸ್.ಟಿ. ಶೆಟ್ಟಿಗಾರ್, ಶ್ರೀ ನಿಕೇತನ ಉಡುಪಿಯ ಎಂ. ವಿಜಯ ಕುಮಾರ್, ಹೆಬ್ರಿ ಲೆಕ್ಕ ಪರಿಶೋಧಕರಾದ ಎಂ.ರವಿ ರಾವ್,
ಮುದ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀನಿವಾಸ ಭಂಡಾರಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಸನ್ನ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ಲೋಕೇಶ್ ಶೆಟ್ಟಿಗಾರ್ ಕನ್ಯಾನ,ಯುವ ವೇದಿಕೆ ಅಧ್ಯಕ್ಷ ಸುರೇಶ್ ಶೆಟ್ಟಿಗಾರ್ ಮದಗ, ಮಹಿಳಾ ವೇದಿಕೆ ಅಧ್ಯಕ್ಷೆ ಪ್ರಮೀಳಾ ಜೆ. ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಮನೋರಂಜನಾ ಕಾರ್ಯಕ್ರಮ, ನೃತ್ಯ, ಯಕ್ಷಗಾನ ನೃತ್ಯ, ತುಳುನಾಟಕ ಪ್ರದರ್ಶನಗೊಂಡಿತು.
ಶೆಟ್ಟಿಗಾರ್ ಸಂಘದ ಅಧ್ಯಕ್ಷರಾದ ಸನತ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾಪಿಸಿದರು. ದೀಪಾ ಲೋಕೇಶ್ ವರದಿ ವಾಚಿಸಿದರು, ನರೇಂದ್ರ ಕಬ್ಬಿನಾಲೆ ಮತ್ತು ಶ್ರೀ ಮುದ್ರಾಡಿ ನಿರೂಪಿಸಿದರು, ಲತಾ ಶೆಟ್ಟಿಗಾರ್ ವಂದಿಸಿದರು.

