ಪಡುಬಿದ್ರಿ :- ಹಾಸನ , ಚಿಕ್ಕಮಗಳೂರು , ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯನ್ನು ಒಳಗೊಂಡ ರೋಟರಿ ಜಿಲ್ಲೆ 3182 ಇದರ 2026-27 ರ ಸಾಲಿನ MATERNAL AND CHILD HEALTH ವಿಭಾಗದ ಜಿಲ್ಲಾ ವೃೆಸ್ ಚೇರ್ ಮನ್ ಆಗಿ ಪಡುಬಿದ್ರಿ ರೋಟರಿ ಕ್ಲಬ್ ನ ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿಯವರನ್ನು ನಿಯೋಜಿತ ಜಿಲ್ಲಾ ಗರ್ವನರ್ ಬಿ.ಎಮ್ ಭಟ್ ಬ್ರಹ್ಮಾವರ ನಿಯೋಜಿಸಿರುತ್ತಾರೆ.
ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು , ಪ್ರಸ್ತುತ ವರ್ಷ ರೋಟರಿ ವಲಯ- 5 ಕೊ-ಅರ್ಡೀನೇಟರ್ ಅಗಿ ಕಾರ್ಯನಿರ್ವಹಿಸಿರುತ್ತಾರೆ. ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ , ಪಡುಬಿದ್ರಿ ಸಾಗರ ವಿದ್ಯಾ ಮಂದಿರ ಶಾಲೆಯ ಅಡಳಿತಮಂಡಳಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತಿದ್ದಾರೆ. ಧಾರ್ಮಿಕ, ಶೃೆಕ್ಷಣಿಕ , ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿರುತ್ತಾರೆ.

