ಡಾ. ವಿಷ್ಣು ಭರತ್ ಆಲಂಪಳ್ಳಿ ಬರೆದ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕವನ್ನು ಬಿಡುಗಡೆ
ಬೆಂಗಳೂರು : ಬೆಂಗಳೂರಿನ ಬಸವನಗುಡಿ ಆಚಾರ್ಯ ಪಾಠಶಾಲೆ ಶೈಕ್ಷಣಿಕ ಟ್ರಸ್ಟ್ ಮತ್ತು ಎ.ಪಿ.ಎಸ್. ಸಮೂಹ ಸಂಸ್ಥೆಯ ಕಾಲೇಜು ಮೈದಾನದಲ್ಲಿ 77ನೇ ಗಣರಾಜ್ಯೋತ್ಸವನ್ನು ವೈಭವ ಮತ್ತು ದೇಶಭಕ್ತಿ ಭಾವನೆಯೊಂದಿಗೆ ಆಚರಿಸಲಾಯಿತು. ವಿದ್ಯಾರ್ಥಿಗಳು, ಸಿಬ್ಬಂದಿ ಸಂವಿಧಾನದ ಮೌಲ್ಯಗಳನ್ನು ಗೌರವಿಸುವ ಮತ್ತು ಪ್ರೇರಣಾದಾಯಕ ವಾತಾವರಣ ಸೃಷ್ಟಿಸಿದರು.

ರಾಜಗುರು ಶ್ರೀ ಬೆಲ್ಲೂರು ಶಂಕರ್ನಾರಾಯಣ ದ್ವಾರಕನಾಥ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ದೇಶ ಮೊದಲು ಎನ್ನುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಜೊತೆಗೆ ಹಕ್ಕುಗಳಿಗಿಂತ ಕರ್ತವ್ಯಗಳಿಗೆ ಪ್ರದಾನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ, ಸಿಎ ಡಾ. ವಿಷ್ಣು ಭರತ್ ಆಲಂಪಲ್ಲಿ ರಚಿಸಿದ, ಅವರು ಜೀವನ ಅನುಭವ ಒಳಗೊಂಡಿರುವ ಹಂಚಿಕೊಳ್ಳಲಾಗಿದೆ “ಲೈಫ್ ಟ್ವಿಸ್ಟ್ ಅಂಡ್ ಟರ್ನ್” ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಎಪಿಎಸ್ ಅಧ್ಯಕ್ಷ ಡಾ. ವಿಷ್ಣು ಭರತ್ ಅಲಂಪಲ್ಲಿ ಮಾತನಾಡಿ. ಗುಣಾತ್ಮಕ ಶಿಕ್ಷಣ ಪಡೆಯುವ ಜೊತೆಗೆ ಶಿಸ್ತಿನ ಮೌಲ್ಯಗಳು ಮತ್ತು ನೈತಿಕತೆಯ ಮಹತ್ವವನ್ನು ವಿದ್ಯಾರ್ಥಿಗಳು ಅರಿಯಬೇಕು. ದೇಶ ಭಕ್ತಿ ಮತ್ತು ರಾಷ್ಟ್ರ ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳಿಂದ ಮಾರ್ಚ್ ಫಸ್ಟ್, ಮೋಟಾರ್ ಬೈಕ್ ರಾಲಿ, “ವಂದೇಮಾತರಂ” ಭಾರತ 150ನೇ ವಾರ್ಷಿಕೋತ್ಸವವನ್ನು ಸ್ಮರಿಸುವ, ಸಾಂಸ್ಕೃತಿಕ ಪ್ರದರ್ಶನ ನಡೆಯಿತು.
ಆಚಾರ್ಯ ಪಾಠಶಾಲೆ ಶೈಕ್ಷಣಿಕ ಟ್ರಸ್ಟ್ ಮತ್ತು APS ಸಮೂಹ ಸಂಸ್ಥೆಯ ಪ್ರೊ.ಎ. ಪ್ರಕಾಶ್ ಪ್ರಧಾನ ಕಾರ್ಯದರ್ಶಿ, ಪಿ. ಕೃಷ್ಣ ಸ್ವಾಮಿ ಜಂಟಿ ಕಾರ್ಯದರ್ಶಿ, ಕೆ.ಎಸ್. ಅಖಿಲೇಶ್ ಬಾಬು ಖಜಾಂಚಿ, ಎ.ಆರ್. ಮಂಜುನಾಥ್ ಜಂಟಿ ಕಾರ್ಯದರ್ಶಿ, ಸಿ ನಾಗರಾಜ್ ,ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

