ಉಡುಪಿ : ವೃತ್ತಿಪರ ಗಾಲ್ಫ್ ಆಟಗಾರ ಸಾಬಿಕ್ ಸಲೀಂ ಬಾಜಿಗೆ ಸನ್ಮಾನ

0
8

ಉಡುಪಿ : ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿ ವತಿಯಿಂದ ಉಡುಪಿಯ ಹೋಟೆಲ್ ಮಣಿಪಾಲ ಇನ್ ರಂಜಿತಾ ಪ್ಯಾಲೇಸ್ ಸಭಾಂಗಣದಲ್ಲಿ ವೃತ್ತಿಪರ ಗಾಲ್ಫ್ ಆಟಗಾರ ಸಾಬಿಕ್ ಸಲೀಂ ಬಾಜಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.

ಭಾರತ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಈಜಿಪ್ಟ್ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಗಾಲ್ಫ್ ಕ್ರೀಡೆಯಲ್ಲಿ ಸಾಧಿಸಿರುವ ಅತ್ಯುತ್ತಮ ಸಾಧನೆಗಳು, ನಿರಂತರ ಯಶಸ್ಸು, ಜಯಿಸಿದ ಚಾಂಪಿಯನ್‌ಶಿಪ್‌ಗಳು ಮತ್ತು ಪಡೆದ ಅಂತರರಾಷ್ಟ್ರೀಯ ಮಾನ್ಯತೆಗಳ ಗೌರವಾರ್ಥವಾಗಿ ಈ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿಯ ಅಧ್ಯಕ್ಷ ಡಾ. ರಿಜ್ವಾನ್ ಅಹ್ಮದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ.ಕೇಂದ್ರ ಸಮಿತಿ ಉಪಾಧ್ಯಕ್ಷ ಹುಸೇನ್ ಹೈಕಾಡಿ,ಸಲೀಂ ಬಾಜಿ, ಮಾಜಿ ಅಧ್ಯಕ್ಷ ಮೊಹಮ್ಮದ್ ಸಲೀಂ,ಕೋಶಾಧಿಕಾರಿ ಪೀರ್ ಸಾಹೇಬ್, ಪ್ರದಾನ ಕಾರ್ಯದರ್ಶಿ ಮೌಲಾನಾ ಝಮೀರ್ ಅಹಮದ್ ರಷಾದೀ, ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಇನಯತುಲ್ಲ ಶ್ಯಾಬಂದ್ರೀ, ಉಡುಪಿ ಜಿಲ್ಲಾ ಅಧ್ಯಕ್ಷ ನಕ್ವ ಯಾಹ್ಯ , ಮಾಜಿ ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ, ಜಿಲ್ಲಾ ಕೋಶಾಧಿಕಾರಿ ಜಹೀರ್ ನಾಕೂದ, ಕೇಂದ್ರ ಸಮಿತಿಯ ಟ್ರಸ್ಟಿಗಳಾದ ಅಬ್ದುಲ್ ಹಮೀದ್ ಮೂಡಬಿದ್ರೆ, ಮೊಹಮ್ಮದ್ ಹುಸೇನ್ ಕಾರ್ಕಳ ,ಉಡುಪಿ ತಾಲೂಕು ಅಧ್ಯಕ್ಷ ನಜೀರ್ ನೆಹರು, ಬಿ. ಎಸ್ ಎಫ್ ರಫೀಕ್, ಹಾರೂನ್ ರಶೀದ್ ಸಾಸ್ತಾನ ಮೊದಲಾದವರು ಹಾಗೂ ಕಾರ್ಯಕ್ರಮದಲ್ಲಿ ನಮ್ಮ ನಾಡ ಒಕ್ಕೂಟದ ಕೇಂದ್ರ ಸಮಿತಿ ಪದಾಧಿಕಾರಿಗಳು, ವಿವಿಧ ಜಿಲ್ಲೆ ಮತ್ತು ತಾಲೂಕುಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here