ಹೆಬ್ರಿ : ಪತ್ರಿಕಾ ಏಜೆಂಟ್ ವಿಠ್ಠಲ ಪೂಜಾರಿ ತಳಬ ಅವರ ತಾಯಿ ಕರ್ಜೆ ಗುಡ್ಡೆಯಂಗಡಿ ತಳಬ ನಿವಾಸಿ ನಾರಾಯಣ ಪೂಜಾರಿಯವರ ಪತ್ನಿ ವನಜಾ ಪೂಜಾರಿ ( 65 ) ಅನಾರೋಗ್ಯದಿಂದ ಭಾನುವಾರ ರಾತ್ರಿ ನಿಧನರಾದರು.
ಮೃತರು ಅತ್ಯಂತ ಶ್ರಮಜೀವಿಯಾಗಿ ಜನಾನುರಾಗಿಯಾಗಿದ್ದರು. ಮೃತರಿಗೆ ಪತಿ, 4 ಮಂದಿ ಪುತ್ರು, 1 ಮಗಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಸೋಮವಾರ ಅಂತಿಮ ಸರ್ಕಾರ ನಡೆಯಿತು.
ಹಿರಿಯ ಮುಖಂಡ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಕಾಂಗ್ರೆಸ್ ಮುಖಂಡ ಮೈರ್ಮಾಡಿ ಅಶೋಕ ಶೆಟ್ಟಿ, ಪತ್ರಕರ್ತರಾದ ಕುಚ್ಚೂರು ಶಾಂತಿನಿಕೇತನ ಸೌಹಾರ್ಧ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಎಸ್. ಮರಸಣಿಗೆ, ಹೆಬ್ರಿ ತಾಲ್ಲೂಕು ಪತ್ರಕರ್ತರ ಸಂಘದ ಪೂರ್ವಾಧ್ಯಕ್ಷ ಸುಕುಮಾರ್ ಮುನಿಯಾಲ್, ಹೆಬ್ರಿ ಗ್ರಾಮ ಪಂಚಾಯಿತ್ ಸದಸ್ಯರಾದ ಹೆಬ್ರಿ ಜನಾರ್ಧನ್, ಸಂತೋಷ ನಾಯಕ್ ಕನ್ಯಾನ, ಮಾಜಿ ಸದಸ್ಯ ವಸಂತ ಪ್ರಭು ಹುತ್ತುರ್ಕೆ, ಕರ್ಜೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಭಾಕರ ಪೂಜಾರಿ, ಮಾಜಿ ಸದಸ್ಯ ಕೃಷ್ಣ ಪೂಜಾರಿ, ಹೆಬ್ರಿ ಗೋಪಾಲ ಭಂಡಾರಿಯವರ ಅಳಿಯ ಶ್ವೇತಕುಮಾರ್, ಹೆಬ್ರಿ ಗಣೇಶ್ ಸೇರಿಗಾರ್ ಸೇರಿದಂತೆ ಹಲವಾರು ಮಂದಿ ಅಂತಿಮದರ್ಶನ ಪಡೆದರು.

