JCI ಪರ್ಕಳ, ಮಂಗಳ ಕಲಾಸಾಹಿತ್ಯ ವೇದಿಕೆ ಪರ್ಕಳ, ನೇತ್ರಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಬೆಟ್ಟು ಹಾಗೂ ಶ್ರೀ ವಿಘ್ನೇಶ್ವರ ಸಭಾಭವನ, ಪರ್ಕಳ ಅವರ ಸಹಯೋಗದಲ್ಲಿ ಬ್ರಹತ್ ಉಚಿತ ನೇತ್ರ ತಪಾಸಣಾ ಶಿಬಿರ ವನ್ನು 26 ಜನವರಿ 2026 ರಂದು ಪರ್ಕಳದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಪರ್ಕಳದ ಅಧ್ಯಕ್ಷ Jc HGF ಭರತ್ ಕೆ ಕುಲಾಲ್ ವಹಿಸಿದರು. ಮಂಗಳ ಕಲಾಸಾಹಿತ್ಯ ವೇದಿಕೆಯ ಅಧ್ಯಕ್ಷರು ಶ್ರೀ ನಟರಾಜ್ ಪರ್ಕಳ ಕಾರ್ಯಕ್ರಮದಲ್ಲಿ ತಮ್ಮ ಧನ್ಯವಾದಗಳನ್ನು ಸಮರ್ಪಿಸಿದರು.
ಶಿಬಿರದಲ್ಲಿ ಸಮಗ್ರವಾಗಿ ಸುಮಾರು 150 ಜನರ ನೇತ್ರ ತಪಾಸಣೆ ನಡೆಯಿತು. ಅವರಲ್ಲಿ 88 ಜನರಿಗೆ ಉಚಿತ ಕನ್ನಡಕ ಹಾಗೆಯೇ, 16 ಜನರಿಗೆ ದೃಷ್ಟಿ ಸುಧಾರಣೆಗೆ ಉಚಿತ ಕಣ್ಣಿನ ಪೊರೆ ಕಳಚುವ ಶಸ್ತ್ರಚಿಕಿತ್ಸೆ ಯ ದಿನಾಂಕ ನಿಗದಿ ಮಾಡಲಾಯಿತು.
ಈ ಶಿಬಿರದ ಉದ್ಘಾಟಕರಾಗಿ ಆಗಮಿಸಿದ ನಾಡೋಜ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರು ನೇತ್ರ ಆರೋಗ್ಯದ ಮಹತ್ವವನ್ನು ವಿವರಿಸಿ, ಉಚಿತ ಸೇವೆಗಳ ಮೂಲಕ ಜನರ ಆರೋಗ್ಯ ಸಂರಕ್ಷಣೆಗೆ ನೆರವಾಗುವುದು ಅತ್ಯಂತ ಮುಖ್ಯವೆಂದು ಹೇಳಿದರು.
ಜೇಸಿಐ ಇಂಡಿಯಾ, ಜೋನ್ ಡೈರೆಕ್ಟರ್ – ಕಮ್ಯುನಿಟಿ ಡೆವಲಪ್ಮೆಂಟ್, ಜೋನ್ 15, JFA ವಿಘ್ನೇಶ್ ರಾವ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಸಮುದಾಯದ ಅಭಿವೃದ್ಧಿಗೆ ಮಹತ್ವಪೂರ್ಣವಾಗಿದ್ದು, ಜೇಸಿಐ ಪರ್ಕಳ ಇನ್ಮುಂದೆ ಕೂಡ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಹೇಳಿದರು. ಶಿಬಿರದಲ್ಲಿ ಭಾಗಿಯಾದ ಪರ್ಕಳ ಮತ್ತು ಆಸುಪಾಸಿನ ಅನೇಕ ಜನರು ಈ ಸೇವೆಯಿಂದ ಲಾಭಾಂಶ ಪಡೆದರು.

