ಅಖಿಲ ಭಾರತ ಮಹಾಮುಷ್ಕರದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರೈತ ಕಾರ್ಮಿಕರ ಪಾದಯಾತ್ರೆ

0
25

ವರದಿ ರಾಯಿ ರಾಜ ಕುಮಾರ

ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಪೊರೇಟ್ ಪರ ರೂಪಿಸಿರುವ ನಾಲ್ಕು ಸಂಹಿತೆಗಳ ವಿರುದ್ಧ ರೈತ ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾ ಮುಷ್ಕರದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜನವರಿ 26 ರಿಂದ 29 ರವರೆಗೆ ಪಾದಯಾತ್ರೆ ನಡೆಯಲಿದೆ.

ಆ ಪ್ರಕಾರ ಮೂಡುಬಿದಿರೆಯಿಂದ ಜನವರಿ 27ರಂದು ಮೂಡುಬಿದಿರೆ ಬಸ್ಸು ನಿಲ್ದಾಣದಿಂದ ಹೊರಟ ಪಾದಯಾತ್ರೆಯನ್ನು ಉದ್ದೇಶಿಸಿ ದ.ಕ. ಜಿಲ್ಲಾ ಸಿ ಐ ಟಿ ಯು ಉಪಾಧ್ಯಕ್ಷ ವಸಂತ ಆಚಾರಿ, ನಾಯಕರುಗಳಾದ ರಾಧಾ, ನೋಣಯ್ಯ ಗೌಡ, ರಮಣಿ ಹಾಗೂ ಇತ್ಯಾದಿಯನ್ನು ಮಾತನಾಡಿದರು.

ವಿದೇಶಿ ಮೂಲದ ಉದ್ಯಮಗಳಿಗೆ ಭಾರತದ ನೆಲವನ್ನು ನೀಡುವ ಕ್ರಮವನ್ನು ನಿಲ್ಲಿಸಬೇಕು. ವಿಮಾಕ್ಷೇತ್ರದಲ್ಲಿ ದೇಶಿಯ ಕಂಪೆನಿಗಳಿಗೆ ಹೆಚ್ಚಿನ ಅವಕಾಶವನ್ನು ಒದಗಿಸಬೇಕು. ದೇಶಿಯ ಜನಸಾಮಾನ್ಯರ ಹಾಗೂ ದುಡಿಯುವ ವರ್ಗದ ಜನರಿಗೆ ಹೆಚ್ಚಿನ ಅವಕಾಶಗಳು ದೊರಕುವಂತೆ ಮಾಡಬೇಕೆಂದು ಸರಕಾರಗಳನ್ನು ಆಗ್ರಹಿಸಿದರು.

LEAVE A REPLY

Please enter your comment!
Please enter your name here