ಬೆಂಗಳೂರಿನ ರಾಜಾಜಿನಗರದಲ್ಲಿರುವ ಶ್ರೀರಾಮ ಸೇನೆಯ ಕಚೇರಿಯಲ್ಲಿ ಹಾಸನ ನಗರದ ಸಾಹಿತಿ, ಶಿಕ್ಷಕಿ ಸಮಾಜ ಸೇವಕಿ, ಪತ್ರಕರ್ತೆ ಹಾಗೂ ಪ್ರತಿಮಾ ಸಾಮಾಜಿಕ,ಸಾಂಸ್ಕೃತಿಕ ಟ್ರಸ್ಟ್ (ರಿ)ನ ಸಂಸ್ಥಾಪಕ ಅಧ್ಯಕ್ಷರು ಆದ ಹೆಚ್. ಎಸ್. ಪ್ರತಿಮಾ ಹಾಸನ್ ರವರ 13ನೇ ಕೃತಿಯಾದಂತಹ ” ಪ್ರತಿ ಬೋಧ ” ತಾರ್ಕಿಕ ಲೋಕದಲ್ಲಿ ಒಂದು ಪಯಣ ಎಂಬ ಲೇಖನಗಳ ಮಾಲೆ ಕೃತಿಯನ್ನು ಶ್ರೀ ರಾಮ ಸೇನೆಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಆದ ಹಿಂದೂ ಹೃದಯ ಸಾಮ್ರಾಟ್ ಶ್ರೀ ಪ್ರಮೋದ್ ಮುತಾಲಿಕ್ ರವರು ಬಿಡುಗಡೆಯನ್ನು ಮಾಡಿದರು.
ಕೃತಿ ಕುರಿತಾಗಿ ಪ್ರಸ್ತುತ ನಡೆಯುತ್ತಿರುವ ಘಟನೆಗಳಿಗೆ ಸಾಮಾಜಿಕ ಕಳಕಳಿಯನ್ನು ಒಳಗೊಂಡಂತಹ ಹಲವಾರು ವಿಚಾರಗಳನ್ನು ಒಳಗೊಂಡಿದ್ದು ಇನ್ನು ಹಲವಾರು ಕೃತಿಗಳನ್ನು ರಚಿಸಲಿ ಹಿಂದೂ ಪರವಾದ, ಸಾಂಸ್ಕೃತಿಕ ಉಳಿವಿನ, ಧಾರ್ಮಿಕ ಆಧ್ಯಾತ್ಮಿಕವಾದಂತಹ ಪರಂಪರೆಯನ್ನು ಉಳಿಸುವಂತಹ ಲೇಖನಗಳನ್ನು ಹೆಚ್ಚು ಹೆಚ್ಚು ಬರೆಯಲಿ ಯಾವಾಗಲೂ ಶ್ರೀರಾಮ ಸೇನೆ ಸೋದರಿ ಹೆಚ್. ಎಸ್. ಪ್ರತಿಮಾ ಹಾಸನ್ ರವರ ಪರವಾಗಿರುತ್ತದೆ ಎಂದು ತಿಳಿಸುತ್ತಾ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಕ್ಕೆ ಶುಭ ಕೋರುತ್ತಾ ಸಾಹಿತ್ಯ ಹಾಗೂ ಸಮಾಜಸೇವೆ ಹೀಗೆ ಮುಂದುವರೆಯಲಿ ಇವರದು. ಯುವ ವಯಸ್ಸಿನಲ್ಲಿ ಪ್ರತಿಭಾನ್ವಿತರಾದ ಇವರಿಗೆ ಇನ್ನು ಹೆಚ್ಚು ಹೆಚ್ಚು ಹೆಸರುವಾಸಿಯಾಗಲೆಂದು ಆಶೀರ್ವದಿಸಿದರು.

ನಂತರ ಲೇಖಕಿ ಯು ಪ್ರಮೋದ್ ಮುತಾಲಿಕ್ ರವರ ಬಗ್ಗೆ ಆಶು ಕವಿತೆಯನ್ನು ಹೇಳುತ್ತಾ ಸಾಮಾಜಿಕ, ಸಾಹಿತಿಕ, ಶೈಕ್ಷಣಿಕ, ಸಾಂಸ್ಕೃತಿಕ ಪತ್ರಿಕೋದ್ಯಮ ಹಲವಾರು ರಂಗಗಳಲ್ಲಿ ತಾನು ನಿರಂತರವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸುತ್ತಾ ಆಶೀರ್ವಾದ ಪಡೆದರು. ಹಿಂದೂ ಹೃದಯ ಸಾಮ್ರಾಟ್ ರವರಿಗೆ ಹುಟ್ಟು ಹಬ್ಬದ ಆಚರಣೆಯನ್ನು ಸಂಭ್ರಮವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸುಂದರೇಶ್ ನರ್ಗಲೆ ಕಾರ್ಯಾಧ್ಯಕ್ಷರು ರಾಜ್ಯ ದಕ್ಷಿಣ ಪ್ರಾಂತ್ಯ, ಸತೀಶ್ ಉಪಾಧ್ಯಕ್ಷರು ಬೆಂಗಳೂರು ನಗರ, ಮೋಹನ್ ಕುಮಾರ್ ವಿ ಮಾಧ್ಯಮ ಮಿತ್ರರು ರಾಜ್ಯ ದಕ್ಷಿಣ ಪ್ರಾಂತ್ಯ, ಇನ್ನೂ ಹಲವರು ಉಪಸ್ಥಿತರಿದ್ದರು

