ಸೇಂಟ್ ಪಾಲ್ಸ್ ಶಾಲೆಯಲ್ಲಿ ಗುರು ವಂದನೆ ಸ್ನೇಹ ಸಮ್ಮಿಲನ ಸಂಭ್ರಮ

0
30

ದಾವಣಗೆರೆ : ದಾವಣಗೆರೆಯ ಪಿ.ಜೆ. ಬಡಾವಣೆಯ ಸೇಂಟ್ ಪಾಲ್ಸ್ ಕಾನ್ವೆಂಟ್‌ನಲ್ಲಿ ಇತ್ತೀಚಿಗೆ 1999-2000 ಸಾಲಿನ ವಿದ್ಯಾರ್ಥಿನಿಯರು ಬೆಳ್ಳಿ ಹಬ್ಬದ ಆಚರಣೆಯೊಂದಿಗೆ ಹಿರಿಯ ಶಿಕ್ಷಕ, ಶಿಕ್ಷಕಿಯರಿಗೆ ಅಭಿಮಾನದಿಂದ ಗುರುವಂದನೆ ಅರ್ಪಿಸಿ ಸನ್ಮಾನಿಸಿ ಗೌರವಿಸಿದರು.

ನೂರಾರು ಹಳೇ ವಿದ್ಯಾರ್ಥಿನಿಯರು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿ ಶಿಕ್ಷಣದೊಂದಿಗೆ ತಮ್ಮ ತಮ್ಮ ಜೀವನದ ಸಾಧನೆಗೆ, ವಿದ್ಯಾಸಂಸ್ಥೆ ಶಿಕ್ಷಕ-ಶಿಕ್ಷಕಿಯರ ಕಠಿಣ ಪರಿಶ್ರಮದಿಂದ, ಕರ್ತವ್ಯ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಸಹಕರಿಸಿದವರಿಗೆ ಕೃತಜ್ಞತೆ ಅರ್ಪಿಸಿದರು. ಅಪರೂಪಕ್ಕೆ ಸೇರಿದ ವಿದ್ಯಾರ್ಥಿನಿಯರು ಸ್ನೇಹ ಸಮ್ಮಿಲನದೊಂದಿಗೆ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here