ಬಂಟ್ವಾಳ : ದೇಶ ಪ್ರಗತಿಯತ್ತ ಸಾಗಬೇಕಾದರೆಯುವಸಮುದಾಯ ಕ್ರೀಯಾಶೀಲರಾಗಬೇಕು. ಡಾ|ಅಂಬೇಡ್ಕರ್‌ರವರ ಆಶಯದಂತೆ ರಚಿತವಾದ ಸಂವಿಧಾನದ ಪ್ರತಿ ಅಂಶಗಳೂ ಮುಖ್ಯವಾಗಿದ್ದು, ಜಗತ್ತಿನ ಅತ್ಯಂತ ದೊಡ್ಡ ಲಿಖಿತ ಸಂವಿದಾನವೆಂದು ಪ್ರಖ್ಯಾತ ಪಡೆದಿದೆ ಎಂದು ಪ್ರಾಂಶುಪಾಲರಾದ ಎಂ.ಡಿ ಮಂಚಿ ನುಡಿದರು.
ಇವರು ಶ್ರೀ ವೆಂಕಟರಮಣಸ್ವಾಮಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ನಡೆದಗಣರಾಜ್ಯೋತ್ಸವಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ NCC ಅಧಿಕಾರಿ ಲೆ.ಪ್ರದೀಪ್ ಪೂಜಾರಿ ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶಿವಣ್ಣಪ್ರಭು ಕೆ ವಂದಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಕಾಶೀನಾಥ ಶಾಸ್ರೀ ಹೆಚ್ ವಿ ನಿರೂಪಿಸಿದರು.ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿನಿಯರು ದೇಶಭಕ್ತಿಗೀತೆಯನ್ನು ಹಾಡಿದರು.

