ಧರ್ಮಬಂಧು ಇಂದು ಬೆಳಿಗ್ಗೆ 29-1-2026 ಗುರುವಾರ ಪ.ಪೂ 105 ಅಯಿ೯ಕಾ ವಿಪುಲಾ ಮತಿ,ಪ.ಪೂ105 ವಿಮುಕ್ತ್ ಮತಿ ಮಾತಾಜಿ ಮತ್ತು ಕ್ಷುಲ್ಲಿಕಾ ವಿಶಾಲ ಮತಿ ಮಾತಾಜಿ ಆಚಾರ್ಯ ವಿವೇಕ್ ಸಾಗರ (ಆಚಾರ್ಯ ಚಾಣಿ ವಾಲೆ ಶಾಂತಿ ಸಾಗರ ಮುನಿ ಮಹಾರಾಜ್ ಪರಂಪರೆ) ಶಿಷ್ಯೆಯರು ಜೈನ ಕಾಶಿ ಮೂಡುಬಿದಿರೆಗೆ ಅಲಂಗಾರು ಬಳಿಯಿಂದ ಪುರ ಪ್ರವೇಶ ಮಾಡಿ ಮೂಡುಬಿದಿರೆ ಜೈನ ಕಾಶಿ ಹದಿನೆಂಟು ಬಸದಿ ಶ್ರೀ ಮಠದಲ್ಲಿ ಪರಮಾಗಮಗಳಾದ ಧವಳತ್ರಯ ಗ್ರಂಥ ದರ್ಶನ ಮಾಡಿದರು .
ಶ್ರಾವಕ ಶ್ರಾವಿಕೆಯರು ಹೆಚ್ಚಿನ ಸಂಖ್ಯೆಯಲ್ಲಿ ವಿಹಾರದಲ್ಲಿ ಪಾಲ್ಗೊಂಡು ಮೂಡುಬಿದಿರೆ ಅಲಂಗಾರು ಬಡಗ ಬಸದಿ ಬಳಿಯಿಂದ ಬೆಳಿಗ್ಗೆ 8.30 ಕ್ಕೆ ಭಕ್ತಿ ಪೂರ್ವಕ ಸ್ವಾಗತಿಸಿದರು . ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತ ವ್ರoದ ಬಳಿಕ ಶ್ರೀ ದಿಗಂಬರ ಜೈನ ಮಠ ದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯವರ್ಯ ಮಹಾ ಸ್ವಾಮೀಜಿ ಮಾರ್ಗದರ್ಶನದಲ್ಲಿ ಭಗವಾನ್ ಪಾರ್ಶ್ಶ್ವನಾಥ ಸ್ವಾಮಿಗೆ ಕ್ಷೀರ ಅಭಿಷೇಕ ಕುಷ್ಮಾ oಡಿನೀ, ಪದ್ಮಾವತಿ ದೇವಿಗೆ ಶೋಡಷೋಪ ಚಾರ ಪೂಜೆ ಮಾತಾಜಿ ಸಂಘಕ್ಕೆ ಪಾದ ಪೂಜೆ ನೆರವೇರಿತು.
ಸಂಜೆ 4.00 ಗಂಟೆಗೆ ವೇಣೂರು ಕಡೆ ರೋಹಿಣಿ ವ್ರತ ನಿರತ ಮಾತಾಜಿ ಸಂಘ ವಿಹಾರ ಮಾಡಿತು , ಎಂದು ಜೈನ ಮಠ ಮೂಡುಬಿದರೆ ಪ್ರಕಟಣೆ ತಿಳಿಸಿದೆ.

