ವರದಿ ರಾಯಿ ರಾಜ ಕುಮಾರ
ಸುಬ್ರಹ್ಮಣ್ಯ ಸಭಾದಲ್ಲಿ 15 ವರ್ಷಕ್ಕೂ ಅಧಿಕ ಕಾಲ ನಿರ್ದೇಶಕಿಯಾಗಿ, ಈಗ 2ನೇ ಅವಧಿಗೆ ಉಪಾಧ್ಯಕ್ಷ ರಾಗಿ ಸೇವೆ ಸಲ್ಲಿಸುತ್ತಿರುವ ಸುಬ್ರಹ್ಮಣ್ಯ ಸಭಾದ ವಜ್ರ ಮಹೋತ್ಸವದ ಸಮಯದಲ್ಲಿ ಮಹಿಳಾ ವೇದಿಕೆಯ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ಸಂಘಟನ ಸಾಮರ್ಥ್ಯವನ್ನು ತೋರಿಸಿದ್ದರು.
ಸುಬ್ರಹ್ಮಣ್ಯ ಸಭಾ ತನ್ನ ಶತಮಾನೋತ್ಸದಲ್ಲಿ ಜತೆ ಕಾರ್ಯದರ್ಶಿಯಾಗಿ, ಈಗ ಸುಬ್ರಹ್ಮಣ್ಯ ಸಭಾದ ಉಪಾಧ್ಯಕ್ಷ ಸ್ಥಾನದ ಕೆಲಸದ ಜೊತೆ ಸುಬ್ರಹ್ಮಣ್ಯ ಸಭಾದ ಹೆಮ್ಮೆಯ ಅಂಗ ಸಂಸ್ಥೆಯಾದ ಶಿವ ಸದನ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಯಾಗಿ, ಶಿವ ಸದನದ ಹಿರಿಯ ನಾಗರಿಕ ವಸತಿ ಗೃಹ ಮತ್ತು ವಿಶೇಷ ಚೇತನ ಮಕ್ಕಳಿಗಾಗಿ ಇರುವ ಶಾಲೆಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಇವರ ದಕ್ಷ ಆಡಳಿತದಲ್ಲಿ ಶಿವಸದನ, ಸುಭದ್ರವಾಗಿ, ನಿವಾಸಿಗಳ ಎಲ್ಲಾ ಬೇಡಿಕೆಗಳಿಗೆ, ದಿನ ನಿತ್ಯದ ಅಗತ್ಯತೆಗಳಿಗೆ ಕ್ರಿಯಾತ್ಮಕವಾಗಿ ಸ್ಪಂದಿಸುತ್ತಾ ಬೆಳೆಯುತ್ತಿದೆ. ತಮ್ಮ ನಿಸ್ವಾರ್ಥ ಸೇವೆ ಮತ್ತು ಪ್ರೀತಿಯ ಒಡನಾಟದಿಂದ ಶಿವಸದನದ ನಿವಾಸಿಗಳ ಮನವನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ.
ಸುಮಂಗಲ ಪ್ರಭಾಕರ್, ಈ ಹಿಂದೆ ಪತಿಯ ಜೊತೆ ಮಂಗಳೂರಿನ ಲಯನ್ಸ್ ಕ್ಲಬ್ ನಲ್ಲಿಯೂ 45 ವರ್ಷ ಸಮಾಜಮುಖಿ ಕೆಲಸ ಮಾಡಿ ಡಿಸ್ಟ್ರಿಕ್ಟ್ ಲಯನೆಸ್ ಪ್ರೆಸಿಡೆಂಟ್ ಹುದ್ದೆಗೆ ಏರಿ ತಮ್ಮ ಕ್ಷಮತೆ ಯನ್ನೂ ತೋರಿದ್ದರು. ಇಂತಹ ನಿಸ್ವಾರ್ಥಿ, ಸಾಮಾಜಿಕ ಕಳಕಳಿಯನ್ನು ತನ್ನ ಜೇವನದಲ್ಲಿ ಅಳವಡಿಸಿಕೊಂಡ, ತಮ್ಮ ಜೀವನದ ಬಹು ಭಾಗವನ್ನು ಸಮಾಜದ ಸೇವೆಗಾಗಿ ಸವೆಸಿದ ನೆನಪಿಗಾಗಿ ಸ್ಥಾನಿಕ ಬ್ರಾಹ್ಮಣ ಮಹಾ ಮಂಡಲ ಪುತ್ತೂರಿನಲ್ಲಿ, ನಡೆದ ತನ್ನ 6ನೇ ಸ್ಥಾನಿಕ ಬ್ರಾಹ್ಮಣ ಸಮಾವೇಶ – 2026ರಲ್ಲಿ, ಸಾಧನೆಯನ್ನು ಗುರುತಿಸಿ, ಶಾಲು ಹೊದಿಸಿ, ಫಲ ಪುಷ್ಪ ಮತ್ತು ಪ್ರಶಸ್ತಿ ಪ್ರತ್ರವನ್ನಿತ್ತು, ನೆರೆದ ಎಲ್ಲಾ ಸಮಾಜ ಬಾಂಧವರ ಸಮ್ಮುಖದಲ್ಲಿ ಸನ್ಮಾನಿಸಿತು.

