ಫೆ.1 : ಕಲಾಕುಂಚ ಕೇರಳ ಗಡಿನಾಡ ಶಾಖೆಯ ಆಶ್ರಯದಲ್ಲಿ ಮಹಾಭಾರತದ ಗಮಕ ಸಮಾರಂಭ ಸಮಾರೋಪ

0
22

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಕಲಾಕುಂಚ ಕೇರಳ ಗಡಿನಾಡಿನ ಶಾಖೆಯ ಆಶ್ರಯದಲ್ಲಿ ಫೆಬ್ರವರಿ 1 ರಂದು ಭಾನುವಾರ ಸಂಜೆ 5 ಗಂಟೆಗೆ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯಲ್ಲಿ ಏಕಾಹ ಭಜನಾ ಮಂದಿರದ ಸಭಾಂಗಣದಲ್ಲಿ ಮಹಾಭಾರತದ ಗಮಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಸ್ಥಾಪಕ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್ ರವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧರ್ಮತ್ತಡ್ಕ ಹೆಚ್.ಎಸ್.ಎಸ್. ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ರಾಮಚಂದ್ರ ಭಟ್, ಗೌರವ ಉಪಸ್ಥಿತರಾಗಿ ಏಕಾಹ ಭಜನಾ ಮಂದಿರದ ಟ್ರಸ್ಟಿಗಳಾದ ಲಿಂಗಪ್ಪ ಪಟೇಲ, ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಗೌರವ ಅಧ್ಯಕ್ಷರಾದ ವಿ.ಬಿ.ಕುಳಮರ್ವ, ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ನೂತನ ಅಧ್ಯಕ್ಷರಾದ ರಾಧಾಮಣಿ ಅಗಮಿಸಲಿದ್ದಾರೆ.

ಈ ಆಧ್ಯಾತ್ಮಿಕ ಪರಂಪರೆಯ ಸಮಾರಂಭಕ್ಕೆ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಸರ್ವ ಸದಸ್ಯರು ಪದಾಧಿಕಾರಿಗಳು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here