ಬೆಂಗಳೂರು : ಭಾರತದ ಮುಂಚೂಣಿಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್,ಫೆಬ್ರವರಿ ಮೊದಲ ವಾರದಲ್ಲಿ ‘ಗ್ಯಾಲಕ್ಸಿ ಎ07 5ಜಿ’ಅನ್ನು ಬಿಡುಗಡೆ ಮಾಡಲಿದೆ.
ಆನ್‌ಲೈನ್ ಮನರಂಜನೆ, ಸೋಷಿಯಲ್ ಮೀಡಿಯಾ ಮೂಲಕ ದೃಶ್ಯ ರೂಪದ ಕಥೆ ಹೇಳುವಿಕೆ ಮತ್ತು ಇಡೀ ದಿನ ಬಾಳಿಕೆ ಬರುವ ಬ್ಯಾಟರಿಯನ್ನು ಕೈಗೆಟುಕುವ ದರದಲ್ಲಿ ನಿರೀಕ್ಷಿಸುವ ಭಾರತದ ಡಿಜಿಟಲ್ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಎ- ಸೀರೀಸ್ ನ ಈ ಹೊಸ ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ.

