ಉಡುಪಿ ಬಬ್ಬುಸ್ವಾಮಿ, ಮೂಲಕ್ಷೇತ್ರ ಅಭಿವವೃದ್ದಿಗೆ : ಮುಖ್ಯಮಂತ್ರಿಯ ಅನುದಾನ ಭರವಸೆ

0
58

ಉಡುಪಿ : ಪ್ರಸಿದ್ಧ  ಕಾರ್ಣಿಕ ಕೇತ್ರ ವಾದ ಶ್ರೀ ಬಬ್ಬುಸ್ವಾಮಿ, ಮೂಲಕ್ಷೇತ್ರ, ಜನ್ಮಸ್ಥಳ, ಪಡುತೋನ್ಸೆ, ಕೆಮ್ಮಣ್ಣು, ಉಡುಪಿ ಜಿಲ್ಲೆ, ಇಲ್ಲಿನ ಜೀರ್ಣೋದ್ದಾರ ಕಾಮಗಾರಿಗೆ ಅನುದಾನ ಕೋರಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರನ್ನು ಸನ್ಮಾನ್ಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ರವರ ಮುಖಾಂತರ ಭೇಟಿಯಾಗಿ ಅನುದಾನ ಒದಗಿಸಿಕೊಡುವಂತೆ ಕೋರಲಾಯಿತು. 

ಜೀರ್ಣೋದ್ದಾರ ಕಾಮಗಾರಿಗೆ ಅನುದಾನ ನೀಡುವ  ಭರವಸೆ ನೀಡಿ  ಶುಭ ಹಾರೈಸಿದರು  ಈ ಸಂದರ್ಭದಲ್ಲಿ ಕ್ಷೇತ್ರದ ಮುಕ್ತೇಸರಾದ ಕೋಡಿಕಂಡಾಲ ಗುತ್ತು ರಘುರಾಮ ಶೆಟ್ಟಿ, ಕಂಡಾಲ, ಅಧ್ಯಕ್ಷರಾದ ಮಧುಸೂದನ ಪೂಜಾರಿ ಕೆಮ್ಮಣ್ಣು, ಗುರಿಕಾರರಾದ ಸುಧಾಕರ್ ಮಾಸ್ಟರ್, ಸಭಾಧ್ಯಕ್ಷರ ಆಪ್ತ ಸಹಾಯಕರಾದ ಪ್ರವೀಣ್ ಕುಮಾರ್ ಜೆ.ಪಿ., ಉದ್ಯಮಿ ಜಗದೀಶ್ ಗಂಗೊಳ್ಳಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here