ಮುಂಬೈ ಬ್ರಹ್ಮಕಲಶೋತ್ಸವದಲ್ಲಿ ಮೂಡುಬಿದಿರೆಯ ಶಾರದಾ ನಾಟ್ಯಾಲಯದ ಸಾಂಸ್ಕೃತಿಕ ವೈಭವ

0
30

ಮೂಡುಬಿದಿರೆ : ಶ್ರೀ ಶಾರದಾ ನಾಟ್ಯಾಲಯ, ಮೂಡುಬಿದಿರೆ ಸಾಂಸ್ಕೃತಿಕ ಕಲಾತಂಡವು ಫೆಬ್ರವರಿ 1 ರಂದು ಮಹಾರಾಷ್ಟ್ರ, ಮುಂಬೈಯಲ್ಲಿ ನಡೆಯಲಿರುವ ಶ್ರೀ ದೇವಿ ಭಜನಾ ಮಂದಿರದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಮೂರು ಗಂಟೆಯ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ನೀಡಲಿದ್ದಾರೆ. ಸಂಸ್ಥೆಯ ನಿರ್ದೇಶಕರಾದ ಮೋಹನ್ ಹೊಸ್ಮಾರ್ ಅವರ ನಿರ್ದೇಶನದ ತಂಡದಲ್ಲಿ 50 ಮಂದಿ ಕಲಾವಿದರು ಭಾಗವಹಿಸಲಿದ್ದಾರೆ.

ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಹೋಲ್ಡರ್ ಝೀ ಸ ರಿ ಗ ಮ ಪ ಖ್ಯಾತಿಯ ಗಾಯಕ ಯಶವಂತ್ ಎಂ.ಜಿ , ಅಂತರಾಷ್ಟ್ರೀಯ ಮಟ್ಟದ ಕಲಾವಿದ ಸುನಿಲ್ ಮಂಡ್ಯ, ಖ್ಯಾತ ನಿರೂಪಕ ದೀಪಕ್ ಅಡ್ಯಾರ್ , ಸಂಸ್ಥೆಯ ನೃತ್ಯ ಶಿಕ್ಷಕಿ ಭವಿಷ್ಯ , ಮುಖವರ್ಣಿಕೆಯಲ್ಲಿ ಸತೀಶ್ ಹಾಗೂ ನಾಡಿನ ಹೆಸರಾಂತ ಕಲಾವಿದರು ಅತಿಥಿ ಕಲಾವಿದರಾಗಿ ತಂಡದಲ್ಲಿ ಭಾಗವಹಿಸಲಿದ್ದಾರೆ.

ಈ ಕಲಾತಂಡವು ವಿಶ್ವ ವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮದಲ್ಲಿಯೂ ಭಾಗವಹಿಸಿರುವುದು ಹೆಮ್ಮೆಯ ಸಂಗತಿ. ಈ ಕಲಾ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಕಲಾಪ್ರದರ್ಶನ ನೀಡಲಿದ್ದಾರೆ.

LEAVE A REPLY

Please enter your comment!
Please enter your name here