ರಾಷ್ಟ್ರಭಕ್ತರ ವೇದಿಕೆ ಬಂದಾರು ಮತ್ತು ಮೊಗ್ರು ಗ್ರಾಮ ವತಿಯಿಂದ ಭೂಸೇನೆಯಲ್ಲಿ 22 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸುತ್ತಿರುವ ಎ.ಸಿ.ಪಿ ಹವಾಲ್ದಾರ್ ದೇವಕುಮಾರ್ ಗೌಡ ಬರೆಮೇಲು ಮುಗೇರಡ್ಕ ಇವರಿಗೆ ವೈಭವಪೂರ್ಣ ಮೆರವಣಿಗೆಯೊಂದಿಗೆ ಸ್ವಾಗತ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ- ಬರೆಮೇಲು ಬಾಬು ಗೌಡ ಮತ್ತು ಮೋನಕ್ಕ ದಂಪತಿಗಳ ಪುತ್ರರಾದ ದೇವಪ್ರಸಾದ್ ಗೌಡ ರವರು ಪ್ರಾಥಮಿಕ ಶಿಕ್ಷಣವನ್ನು ಮುಗೇರಡ್ಕ ಮತ್ತು ಬಂದಾರು, ಶಾಲೆ, ಪ್ರೌಢ ಶಿಕ್ಷಣವನ್ನು ಪದ್ಮುಂಜ ಮತ್ತು ಬುಳೇರಿ ಮೊಗ್ರು ಶಾಲೆ, ಪಿಯುಸಿ ವ್ಯಾಸಂಗವನ್ನು ಪದ್ಮುಂಜದಲ್ಲಿ ಉನ್ನತ ಅಂಕದೊಂದಿಗೆ ತೇರ್ಗಡೆ ಹೊಂದಿದ್ದು, ಶಾಲಾ ಜೀವನದಲ್ಲಿ ತಾಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಓಟಗಾರನಾಗಿ ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದರು .
ಇವರು 2003 ನವೆಂಬರ್ ನಲ್ಲಿ ಮಂಗಳೂರಿನಲ್ಲಿ ಭಾರತ ದೇಶದ ರಕ್ಷಣಾ ವಿಭಾಗದ ಭೂ ಸೇನಾ ವಿಭಾಗದಲ್ಲಿ ಆಯ್ಕೆಯಾಗಿ. 2004 ಜನವರಿಯಲ್ಲಿ ಮಧ್ಯಪ್ರದೇಶದ ಭೂಪಾಲ್ ನಲ್ಲಿ (CORE&E.M.E) ಎಲೆಕ್ಟ್ರಾನಿಕ್ ಮೆಕಾನಿಕಲ್ ಇಂಜಿನಿಯರಿಂಗ್ ಟ್ರೈನಿಂಗ್ ಸೆಂಟರ್ ನಲ್ಲಿ ಸುಮಾರು 1ವರ್ಷ 5 ತಿಂಗಳುಗಳ ಕಾಲ ತರಬೇತಿ ಪಡೆದು ದೇಶದ ವಿವಿಧ ರಾಜ್ಯಗಳಾದ ಪಂಜಾಬ್, ಜಮ್ಮು ಕಾಶ್ಮೀರದ ಲಡಾಕ್, ಉತ್ತರಪ್ರದೇಶ, ಜಮ್ಮು ಕಾಶ್ಮೀರ, ಭೂಪಾಲ್, ಅಸ್ಸಾಂ, ಅರುಣಾಚಲಪ್ರದೇಶ, ಉತ್ತರಖಾoಡ್ ನ I.M.A ಡೆಹ್ರಾಡೊನ್, ಪಠಾಣ್ಕೋಟ್ (ಪಂಜಾಬ್) ಹೀಗೆ ಹಲವಾರು ದೇಶದ ಭಯಾನಕ ಗಡಿ ಪ್ರದೇಶದಲ್ಲಿ ಮೈ ಕೊರೆಯುವ -25 ಡಿಗ್ರಿ ಚಳಿಯಲ್ಲೂ 22 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ 31-01-2026 ರಂದು ಸೇವೆಯಿಂದ ನಿವೃತ್ತಿಗೊಂಡು ಫೆಬ್ರವರಿ 1 ರಂದು ಹುಟ್ಟೂರಿಗೆ ಆಗಮಿಸಿದ ಸೈನ್ಯದಲ್ಲಿ ಉತ್ತಮ ಶಿಸ್ತಿನ ಸಿಪಾಯಿಯಾಗಿದ್ದು. ತನ್ನ ಕಾರ್ಯದಲ್ಲಿ ಯಾವುದೇ ಕಪ್ಪು ಚುಕ್ಕೆಯನ್ನು ಹೊಂದದೆ. ಸೇನೆಯ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆದುಕೊಂಡಿದ್ದ ಹೆಮ್ಮೆಯ ಭಾರತ ಮಾತೆಯ ಸುಪುತ್ರ ಎ.ಸಿ.ಪಿ ಹವಾಲ್ದಾರ್ ದೇವಕುಮಾರ್ ಗೌಡ ರವರಿಗೆ ರಾಷ್ಟ್ರ ಭಕ್ತರ ವೇದಿಕೆ ಬಂದಾರು, ಮೊಗ್ರು ಗ್ರಾಮದ ವತಿಯಿಂದ ಗೌರವಪೂರ್ವಕ ಅಭಿವಂದನೆಗಳನ್ನು ಸಲ್ಲಿಸಿದ್ದಾರೆ.
ದೇಶದ ರಕ್ಷಣಾ ವಿಭಾಗದ ಭೂಸೇನೆಯಲ್ಲಿ 22 ವರ್ಷಗಳ ಕಾಲ ಅಪ್ರತಿಮ ಸೇವೆಗೈದು ನಿವೃತರಾಗಿ ಹುಟ್ಟೂರಿಗೆ ಆಗಮಿಸುತ್ತಿರುವ ಭಾರತಾಂಬೆಯ ಹೆಮ್ಮೆಯ ಸುಪುತ್ರ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ, ಬರೆಮೇಲು ನಿವಾಸಿ ದೇವಪ್ರಸಾದ್ ಗೌಡ ರವರು 01 ಫೆಬ್ರವರಿ 2026,ಆದಿತ್ಯವಾರ. ಸಂಜೆ: 4.30 ಕ್ಕೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ಕುಪ್ಪೆಟ್ಟಿ- ಉರುವಾಲು- ಪದ್ಮುಂಜ- ಮೈರೋಳ್ತಡ್ಕ – ಅಲೆಕ್ಕಿ ಮೊಗ್ರು – ಮುಗೇರಡ್ಕ ದೈವಸ್ಥಾನ ಬಳಿಯವರೆಗೆ ಮೆರವಣಿಗೆ ಮೂಲಕ ಸಾಗಲಿದೆ.
ಸಂಜೆ 5.30 ಕ್ಕೆ ಸರಿಯಾಗಿ ಮುಗೇರಡ್ಕ ದೈವಸ್ಥಾನದ ಬಳಿ ಅಭಿನಂದನಾ ಕಾರ್ಯಕ್ರಮ ನೆರವೇರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆoದು ರಾಷ್ಟ್ರಭಕ್ತ ವೇದಿಕೆ ಬಂದಾರು,ಮೊಗ್ರು ಗ್ರಾಮ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಸಂಜೆ 5.30 ಕ್ಕೆ ಅಭಿನಂದನಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ವಿವಿಧ ಗಣ್ಯರು, ನಿವೃತ್ತ ಸೇನಾನಿಗಳು ಸಂಘದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಉಪಸ್ಥಿಯಲ್ಲಿ ಕಾರ್ಯಕ್ರಮ ನೆರವೇರಲಿದೆ.


